ಉಗ್ರರ ಒಳನುಸುಳುವಿಕೆ ಪ್ರಕರಣ; ಜಮ್ಮುವಿನ ವಿವಿಧೆಡೆ ಎನ್‌ಐಎ ಶೋಧ
Update: 2025-03-19 21:55 IST

ಹೊಸದಿಲ್ಲಿ: ಉಗ್ರಗಾಮಿಗಳ ಒಳನುಸುಳುವಿಕೆ ಪ್ರಕರಣಕ್ಕೆ ಸಂಬಂಧಿಸಿ ಜಮ್ಮು ಪ್ರಾಂತದ 12 ಸ್ಥಳಗಳಲ್ಲಿ ರಾಷ್ಟ್ರೀಯ ತನಿಖಾ ಏಜೆನ್ಸಿ (ಎನ್‌ಐಎ) ಬುಧವಾರ ಶೋಧ ಕಾರ್ಯಾಚರಣೆನಡೆಸಿದೆ.
ಅಂತಾರಾಷ್ಟ್ರೀಯ ಗಡಿ (ಐಬಿ) ಹಾಗೂ ಗಡಿನಿಯಂತ್ರಣ ರೇಖೆ (ಎಲ್‌ಓಸಿ)ಯ ಮೂಲಕ ನಿಷೇಧಿತ ಉಗ್ರಗಾಮಿ ಸಂಘಟನೆ ಲಷ್ಕರೆ ತಯ್ಯಬಾ (ಎಲ್‌ಇಟಿ) ಹಾಗೂ ಜೈಶೆ ಮೊಹಮ್ಮದ್ (ಜೆಇಎಂ) ಸಂಘಟನೆಗೆ ಸೇರಿದ ಉಗ್ರರ ಒಳನುಸುಳುವಿಕೆ ಕುರಿತ ಮಾಹಿತಿಯನ್ನು ಆಧರಿಸಿ ಕಳೆದ ವರ್ಷ ದಾಖಲಾಗಿದ್ದ ಪ್ರಕರಣಕ್ಕೆ ಸಂಬಂಧಿಸಿ ಈ ದಾಳಿಗಳನ್ನು ನಡೆಸಲಾಗಿದೆ.
ಜಮ್ಮು ಪ್ರಾಂತದಿಂದ ರಹಸ್ಯವಾಗಿ ಕಾರ್ಯಾಚರಿಸುತ್ತಿರುವ ಕಾರ್ಯಕತರ್ತರು ಹಾಗೂ ಇತರ ಉಗ್ರರ ಸಹಚರರು ಈ ಒಳನುಸುಳುವಿಕೆಗೆ ನೆರವಾಗಿದ್ದರು. ಉಗ್ರರಿಗೆ ಸಂಚಾರದ ನೆರವು, ಆಹಾರ ಆಶ್ರಯ ಹಾಗೂ ಹಣವನ್ನು ಒದಗಿಸುತ್ತಿದ್ದರು ಎಂದು ಆರೋಪಿಸಲಾಗಿದೆ.