ಜಮ್ಮುಕಾಶ್ಮೀರ | ಜನಪ್ರಿಯ ಪ್ರವಾಸಿ ತಾಣ ಪಹಲ್ಗಾಮ್‌ನಲ್ಲಿ ಗುಂಡಿನ ದಾಳಿ : ಕನಿಷ್ಠ ಐವರು ಪ್ರವಾಸಿಗರಿಗೆ ಗಾಯ
Update: 2025-04-22 16:40 IST

ಸಾಂದರ್ಭಿಕ ಚಿತ್ರ | PC : NDTV
ಪಹಲ್ಗಾಮ್: ಜಮ್ಮುಕಾಶ್ಮೀರದ ಪಹಲ್ಗಾಮ್‌ನಲ್ಲಿ ಶಂಕಿತ ಭಯೋತ್ಪಾದಕರ ದಾಳಿಗೆ ಕನಿಷ್ಠ ಐವರು ಪ್ರವಾಸಿಗರು ಗಾಯಗೊಂಡಿರುವ ಬಗ್ಗೆ ವರದಿಯಾಗಿದೆ.
ಪಹಲ್ಗಾಮ್‌ನ ಬೈಸರನ್ ಕಣಿವೆಯಲ್ಲಿ ಗುಂಡಿನ ದಾಳಿ ನಡೆದಿದೆ. ಈ ಪ್ರದೇಶಕ್ಕೆ ಕಾಲ್ನಡಿಗೆಯಲ್ಲಿ ಅಥವಾ ಕುದುರೆಯ ಮೇಲೆ ಮಾತ್ರ ತೆರಳಬಹುದಾಗಿದೆ. ಗುಂಡಿನ ದಾಳಿ ಬಳಿಕ ಭದ್ರತಾ ಪಡೆಗಳು ಮತ್ತು ವೈದ್ಯಕೀಯ ತಂಡಗಳು ಸ್ಥಳಕ್ಕೆ ತೆರಳಿವೆ.
ಪಹಲ್ಗಾಮ್ ಕಾಡುಗಳು, ಸರೋವರಗಳು ಮತ್ತು ವಿಸ್ತಾರವಾದ ಹುಲ್ಲುಗಾವಲುಗಳಿಗೆ ಹೆಸರುವಾಸಿಯಾಗಿದೆ. ಇದು ಒಂದು ಜನಪ್ರಿಯ ಪ್ರವಾಸಿ ತಾಣವಾಗಿದೆ.