ಉತ್ತರ ಪ್ರದೇಶ | ಮೊಸಳೆಯನ್ನು ರಕ್ಷಿಸಲು ಅರಣ್ಯ ಇಲಾಖೆಯಿಂದ ಜೆಸಿಬಿ ಬಳಕೆ: ವ್ಯಾಪಕ ಟೀಕೆ

Update: 2025-03-19 16:35 IST
ಉತ್ತರ ಪ್ರದೇಶ | ಮೊಸಳೆಯನ್ನು ರಕ್ಷಿಸಲು ಅರಣ್ಯ ಇಲಾಖೆಯಿಂದ ಜೆಸಿಬಿ ಬಳಕೆ: ವ್ಯಾಪಕ ಟೀಕೆ

Screengrab: X/@bstvlive

  • whatsapp icon

ಲಕ್ನೋ : ಉತ್ತರ ಪ್ರದೇಶದ ಲಲಿತ್‌ಪುರ ಗ್ರಾಮದಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಜೆಸಿಬಿ ಸಹಾಯದಿಂದ ಮೊಸಳೆಯನ್ನು ರಕ್ಷಿಸಿರುವ ವೀಡಿಯೊ ವೈರಲ್ ಆಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಟೀಕೆ ವ್ಯಕ್ತವಾಗಿದೆ.

ಉತ್ತರಪ್ರದೇಶದ ಜಖ್ಲೋನ್ ಪೊಲೀಸ್ ಠಾಣೆ ವ್ಯಾಪ್ತಿಯ ಲಲಿತ್‌ಪುರ ಗ್ರಾಮದಲ್ಲಿ 12 ಅಡಿ ಉದ್ದ ಮತ್ತು 2 ಕ್ವಿಂಟಾಲ್ ತೂಕದ ಮೊಸಳೆಯೊಂದು ಗೋಧಿ ಹೊಲದಲ್ಲಿ ಕಂಡು ಬಂದಿದೆ. ಈ ಬಗ್ಗೆ ಗ್ರಾಮಸ್ಥರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದರು. ಜೆಸಿಬಿ ಜೊತೆ ಬಂದ ಅರಣ್ಯ ಇಲಾಖೆ ಸಿಬ್ಬಂದಿ ಹಗ್ಗದಿಂದ ಮೊಸಳೆಯನ್ನು ರಕ್ಷಿಸಲು ಪ್ರಯತ್ನಿಸಿದರು. ಆದರೆ, ಅದು ಸಾಧ್ಯವಾಗಿಲ್ಲ. ಕೊನೆಗೆ ಜೆಸಿಬಿ ಬಳಸಿ ಬೃಹತ್ ಮೊಸಳೆಯನ್ನು ಒಂದೇ ಯತ್ನದಲ್ಲಿ ಟ್ರ್ಯಾಕ್ಟರ್‌ಗೆ ಎಸೆಯಲಾಗಿದೆ. ಈ ವೇಳೆ ಮೊಸಳೆಗೆ ಗಾಯವಾಗಿದೆ. ಈ ಕುರಿತ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದೆ.

ಇದರ ಬೆನ್ನಲೇ ಅರಣ್ಯ ಇಲಾಖೆ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ವನ್ಯ ಜೀವಿಗಳನ್ನು ರಕ್ಷಣೆ ಮಾಡುವ ಕ್ರಮ ಅರಣ್ಯ ಇಲಾಖೆ ಅಧಿಕಾರಿಗಳಿಗೆ ತಿಳಿದಿಲ್ವ ಎಂದು ಹಲವರು ಪ್ರಶ್ನಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News