ವಿದ್ಯಾರ್ಥಿಗಳ ಅಮಾನತು ಹಿಂಪಡೆದ ಜೆಎಂಐ
Update: 2025-03-19 22:41 IST

ಹೊಸದಿಲ್ಲಿ: ಕ್ಯಾಂಪಸ್‌ನಲ್ಲಿ ಪ್ರತಿಭಟನೆಯಲ್ಲಿ ಪಾಲ್ಗೊಂಡ ಆರೋಪದಲ್ಲಿ ಶಿಕ್ಷೆಗೊಳಗಾದ ಕನಿಷ್ಠ 10 ವಿದ್ಯಾರ್ಥಿಗಳ ಅಮಾನತನ್ನು ಜಾಮಿಯಾ ಮಿಲ್ಲಿಯಾ ಇಸ್ಲಾಮಿಯಾ (ಜೆಎಂಐ)ರದ್ದುಪಡಿಸಿದೆ.
ಆದರೆ, ಅಮಾನತು ರದ್ದುಪಡಿಸಿದ ಪತ್ರ ಸ್ವೀಕರಿಸಿದ 7 ದಿನಗಳ ಒಳಗೆ ‘‘ಉತ್ತಮ ನಡತೆಯ ಬಾಂಡ್’’ಗೆ ಸಹಿ ಹಾಕುವಂತೆ ವಿದ್ಯಾರ್ಥಿಗಳಿಗೆ ಸೂಚಿಸಿದೆ.
ವಿಶ್ವವಿದ್ಯಾನಿಲಯದ ಅಮಾನತಿಗೆ ದಿಲ್ಲಿ ಉಚ್ಚ ನ್ಯಾಯಾಲಯ ತಡೆ ನೀಡಿದ ಬಳಿಕ ಈ ಬೆಳವಣಿಗೆ ನಡೆದಿದೆ
2024 ಡಿಸೆಂಬರ್ 15ರಂದು ‘‘ಜಾಮಿಯಾ ರೆಸಿಸ್ಟೆಂಟ್ ಡೆ’’ ಆಯೋಜಿಸಿದ ಆರೋಪದಲ್ಲಿ ಇಬ್ಬರು ಪಿಎಚ್‌ಡಿ ವಿದ್ಯಾರ್ಥಿಗಳ ವಿರುದ್ಧ ತೆಗೆದುಕೊಳ್ಳಲಾದ ಶಿಸ್ತು ಕ್ರಮದ ವಿರುದ್ಧ ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡ 17 ವಿದ್ಯಾರ್ಥಿಗಳನ್ನು ಜೆಎಐ ಕಳೆದ ತಿಂಗಳು ಅಮಾನತುಗೊಳಿಸಿತ್ತು.