ಕಾಶಿ ನನಗೆ ಸೇರಿದ್ದು, ನಾನು ಕಾಶಿಗೆ ಸೇರಿದವನು: ವಾರಣಾಸಿಯಲ್ಲಿ ಪ್ರಧಾನಿ ಮೋದಿ
Update: 2025-04-11 16:38 IST

ಪ್ರಧಾನಿ ನರೇಂದ್ರ ಮೋದಿ | PC : PTI
ವಾರಣಾಸಿ: “ಕಾಶಿ ಪೂರ್ವಾಂಚಲದ ಆರ್ಥಿಕ ನಕ್ಷೆ” ಎಂದು ಶುಕ್ರವಾರ ಬಣ್ಣಿಸಿದ ಪ್ರಧಾನಿ ನರೇಂದ್ರ ಮೋದಿ, ಕಳೆದ 10 ವರ್ಷಗಳಲ್ಲಿ ವಾರಣಾಸಿಯ ಅಭಿವೃದ್ಧಿ ವೇಗ ಬಿರುಸುಗೊಂಡಿದೆ. ಕಾಶಿ ಕೇವಲ ಪುರಾತನ ನಗರ ಮಾತ್ರವಲ್ಲ; ಪ್ರಗತಿಪರ ನಗರ ಕೂಡಾ” ಎಂದು ಶ್ಲಾಘಿಸಿದರು.
ವಾರಾಣಸಿಯಲ್ಲಿ ಹಲವು ಯೋಜನೆಗಳ ಶಂಕುಸ್ಥಾಪನೆ ಹಾಗೂ ಉದ್ಘಾಟನೆಗಳನ್ನು ನೆರವೇರಿಸಿದ ನಂತರ ಮಾತನಾಡಿದ ಮೋದಿ, ವಾರಣಾಸಿಯ ಜನರಿಗೆ ಭೋಜಪುರಿ ಭಾಷೆಯಲ್ಲಿ ಶುಭಾಶಯ ಕೋರಿದರು.
“ನಾನು ನನ್ನ ಕಾಶಿ ಕುಟುಂಬದ ಸದಸ್ಯರಿಗೆ ವಂದಿಸುತ್ತೇನೆ. ನಾನು ನಿಮ್ಮೆಲ್ಲರಿಂದ ಸ್ವೀಕರಿಸಿರುವ ಪ್ರೀತಿ ಮತ್ತು ಗೌರವಕ್ಕೆ ಯಾವಾಗಲೂ ಆಭಾರಿಯಾಗಿರುತ್ತೇನೆ. ಕಾಶಿ ನನಗೆ ಸೇರಿದ್ದು, ನಾನು ಕಾಶಿಗೆ ಸೇರಿದವನು” ಎಂದು ಅವರು ಹೇಳಿದರು.
ನಿಮ್ಮನ್ನೆಲ್ಲ ಕಾಶಿಯಲ್ಲಿ ಭೇಟಿಯಾಗುವ ಅವಕಾಶ ದೊರೆತದ್ದು ನನ್ನ ಪಾಲಿನ ಅದೃಷ್ಟವಾಗಿದೆ ಎಂದೂ ಅವರು ಹೇಳಿದರು.