ಕರಾಳ ದಿನ ಆಚರಿಸಿದ ʼಕಾಶ್ಮೀರಿ ಮಾಧ್ಯಮಗಳುʼ: ಕಪ್ಪು ಬಣ್ಣದಲ್ಲಿ ಮುಖಪುಟ ಪ್ರಕಟ

Update: 2025-04-24 12:31 IST
ಕರಾಳ ದಿನ ಆಚರಿಸಿದ ʼಕಾಶ್ಮೀರಿ ಮಾಧ್ಯಮಗಳುʼ: ಕಪ್ಪು ಬಣ್ಣದಲ್ಲಿ ಮುಖಪುಟ ಪ್ರಕಟ

PC : PTI

  • whatsapp icon

ಹೊಸದಿಲ್ಲಿ: ಪಹಲ್ಗಾಮ್ನಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ ಪ್ರವಾಸಿಗರು ಸೇರಿದಂತೆ 28 ಮಂದಿ ಮೃತಪಟ್ಟಿದ್ದು, ಘಟನೆಯನ್ನು ಖಂಡಿಸುವ ಸಲುವಾಗಿ ಕಾಶ್ಮೀರದ ಪ್ರಮುಖ ಪತ್ರಿಕೆಗಳು ʼಕರಾಳ ಬುಧವಾರʼವನ್ನು ಆಚರಿಸಿವೆ. ರಾಜ್ಯದ ಪ್ರಮುಖ ಪತ್ರಿಕೆಗಳು ಮುಖಪುಟವನ್ನು ಕಪ್ಪು ಬಣ್ಣದಲ್ಲಿ ಮುದ್ರಿಸಿವೆ.

ಇತ್ತೀಚಿನ ವರ್ಷಗಳಲ್ಲಿ ಈ ಪ್ರದೇಶದಲ್ಲಿ ನಡೆದ ಅತ್ಯಂತ ಭೀಕರ ದಾಳಿ ಇದಾಗಿದ್ದು, ಇಡೀ ದೇಶವೇ ಬೆಚ್ಚಿ ಬಿದ್ದಿದೆ. ಈ ಹಿನ್ನೆಲೆಯಲ್ಲಿ ಗ್ರೇಟರ್ ಕಾಶ್ಮೀರ್, ರೈಸಿಂಗ್ ಕಾಶ್ಮೀರ್, ಕಾಶ್ಮೀರ್ ಉಜ್ಮಾ, ಅಫ್ತಾಬ್ ಮತ್ತು ತೈಮೀಲ್ ಇರ್ಷಾದ್ ಸೇರಿದಂತೆ ಇಂಗ್ಲಿಷ್ ಮತ್ತು ಉರ್ದು ದಿನಪತ್ರಿಕೆಗಳು ತಮ್ಮ ಎಂದಿನ ವಿನ್ಯಾಸವನ್ನು ತ್ಯಜಿಸಿ, ಬಿಳಿ ಮತ್ತು ಕೆಂಪು ಬಣ್ಣದಲ್ಲಿ ಮುಖ್ಯಾಂಶಗಳು ಮತ್ತು ಸಂಪಾದಕೀಯಗಳನ್ನು ಪ್ರಕಟಿಸಿವೆ.

ಅನಂತನಾಗ್ ಜಿಲ್ಲೆಯ ಬೈಸರನ್ ಕಣಿವೆ ಪ್ರದೇಶದ ಪೆಹಲ್ಗಾಮ್ ನಲ್ಲಿ ಪ್ರವಾಸಿಗಳ ಮೇಲೆ ಭಯೋತ್ಪಾದಕರು ನಡೆಸಿದ ದಾಳಿಯಲ್ಲಿ 28 ಮಂದಿ ಮೃತಪಟ್ಟಿದ್ದರು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News