ಕೇರಳ | ಕಾಲೇಜು ಮೈದಾನದಲ್ಲಿ ಆರೆಸ್ಸೆಸ್ ತರಬೇತಿ ಶಿಬಿರ; ವಿದ್ಯಾರ್ಥಿ ಸಂಘಟನೆಗಳಿಂದ ಪ್ರತಿಭಟನೆ

Update: 2025-04-22 16:29 IST
ಕೇರಳ | ಕಾಲೇಜು ಮೈದಾನದಲ್ಲಿ ಆರೆಸ್ಸೆಸ್ ತರಬೇತಿ ಶಿಬಿರ; ವಿದ್ಯಾರ್ಥಿ ಸಂಘಟನೆಗಳಿಂದ ಪ್ರತಿಭಟನೆ

Photo : Screengrab/ MediaOne

  • whatsapp icon

ತಿರುವನಂತಪುರ: ಇಲ್ಲಿಯ ಮಾರ್ ಇವಾನಿಯಸ್ ಕಾಲೇಜು ಮೈದಾನದಲ್ಲಿ ಆರೆಸ್ಸೆಸ್ ನಡೆಸಿದ ತರಬೇತಿ ಶಿಬಿರವು ವಿವಾದವನ್ನು ಸೃಷ್ಟಿಸಿದ್ದು, ಇದರ ವಿರುದ್ಧ ಸ್ಟುಡೆಂಟ್ಸ್ ಫೆಡರೇಷನ್ ಆಫ್ ಇಂಡಿಯಾ (ಎಸ್ಎಫ್ಐ) ತೀವ್ರ ಪ್ರತಿಭಟನೆಯನ್ನು ನಡೆಸುತ್ತಿದೆ.

ವಿವಾದವು ಉಲ್ಬಣಗೊಳ್ಳುತ್ತಿದ್ದಂತೆ ಮಾರ್ ಇವಾನಿಯಸ್ ಕಾಲೇಜಿನ ಆಡಳಿತ ಮಂಡಳಿಯು, ತನ್ನ ಮೈದಾನದಲ್ಲಿ ಯಾವುದೇ ಕಾರ್ಯಕ್ರಮವನ್ನು ನಡೆಸಲು ಆರೆಸ್ಸೆಸ್ ಗೆ ಅಧಿಕೃತ ಪರವಾನಿಗೆಯನ್ನು ನೀಡಿರಲಿಲ್ಲ ಎಂದು ಹೇಳಿದೆ. ಇದು ಉನ್ನತ ಚರ್ಚ್ ಅಧಿಕಾರಿಗಳು ಸಂಸ್ಥೆಯನ್ನು ಕಡೆಗಣಿಸಿ ಶಿಬಿರಕ್ಕೆ ಅನುಮತಿ ನೀಡಿರಬಹುದು ಎಂಬ ಊಹಾಪೋಹಕ್ಕೆ ಕಾರಣವಾಗಿದೆ.

ತರಬೇತಿ ಶಿಬಿರದ ಉದ್ದೇಶ ಅಸ್ಪಷ್ಟವಾಗಿದ್ದು, ತಾನು ಅಧಿಕಾರಿಗಳ ತರಬೇತಿ ಶಿಬಿರವನ್ನು ನಡೆಸುತ್ತಿರುವುದಾಗಿ ಹೇಳಿಕೊಂಡಿದೆ. ಆದರೆ ಶಿಕ್ಷಣ ಸಂಸ್ಥೆಗಳು ಮತ್ತು ದೇವಸ್ಥಾನಗಳಂತಹ ಧಾರ್ಮಿಕ ಸ್ಥಳಗಳನ್ನು ಸೈದ್ಧಾಂತಿಕ ಬೋಧನಾ ಶಿಬಿರಗಳನ್ನಾಗಿ ಬಳಸುವುದನ್ನು ಖಂಡಿಸಿದೆ.

ಆರೆಸ್ಸೆಸ್ ನ ಈ ಕ್ರಮ ಖಂಡನೀಯ ಮತ್ತು ಅಸಾಂವಿಧಾನಿಕವಾಗಿದೆ ಎಂದು ಹೇಳಿಕೆಯಲ್ಲಿ ತಿಳಿಸಿರುವ ಎಸ್ಎಫ್ಐ, ಆರೆಸ್ಸೆಸ್ ವಿದ್ಯಾರ್ಥಿಗಳು ಮತ್ತು ಭಕ್ತರನ್ನು ತರಬೇತಿ ಕಾರ್ಯಕ್ರಮಗಳ ಸೋಗಿನಡಿ ಉಗ್ರವಾದದತ್ತ ಸೆಳೆಯಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದೆ.

Tags:    

Writer - ವಾರ್ತಾಭಾರತಿ

contributor

Editor - Naufal

contributor

Byline - ವಾರ್ತಾಭಾರತಿ

contributor

Similar News