"ಸಿನೆಮಾದಲ್ಲಿ ಯಾವುದೇ ಶಕ್ತಿ ಕೇಂದ್ರವಿಲ್ಲ": ಹೇಮಾ ಸಮಿತಿ ವರದಿ ಕುರಿತು ಮೌನ ಮುರಿದ ಮಮ್ಮುಟ್ಟಿ

Update: 2024-09-01 10:12 GMT

ನಟ ಮಮ್ಮುಟ್ಟಿ - Photo : instagram 

ತಿರುವನಂತಪುರ: ಕೇರಳ ಚಿತ್ರರಂಗದಲ್ಲಿ ಆಘಾತದ ಅಲೆಗಳನ್ನು ಸೃಷ್ಟಿಸಿರುವ ಹೇಮಾ ಸಮಿತಿ ವರದಿ ಕುರಿತು ಹಿರಿಯ ಮಲಯಾಳಂ ನಟ ಮಮ್ಮುಟ್ಟಿ ಅವರು ಕೊನೆಗೂ ಮೌನ ಮುರಿದಿದ್ದಾರೆ.

‘ಸಿನೆಮಾದಲ್ಲಿ ಯಾವುದೇ ಶಕ್ತಿ ಕೇಂದ್ರವಿಲ್ಲ’ ಎಂದು ಮಮ್ಮೂಟ್ಟಿ ರವಿವಾರ ಫೇಸ್ಬುಕ್ ಪೋಸ್ಟ್ ನಲ್ಲಿ ಹೇಳಿದ್ದಾರೆ.

ಸಾಮಾನ್ಯವಾಗಿ ಚಿತ್ರರಂಗದಲ್ಲಿ ಇಂತಹ ಬೆಳವಣಿಗೆಗಳಿಗೆ ಕಲಾವಿದರ ಸಂಘಗಳ ನಾಯಕತ್ವವು ಮೊದಲು ಪ್ರತಿಕ್ರಿಯಿಸುತ್ತದೆ, ಹೀಗಾಗಿ ವರದಿಯ ಬಗ್ಗೆ ತಾನು ಮೌನ ವಹಿಸಿದ್ದೆ ಎಂದು ಅವರು ತಿಳಿಸಿದ್ದಾರೆ.

ಹೇಮಾ ವರದಿಯಲ್ಲಿ ಮಾಡಲಾಗಿರುವ ಶಿಫಾರಸುಗಳನ್ನು ಸ್ವಾಗತಿಸಿರುವ 72ರ ಹರೆಯದ ಮಮ್ಮುಟ್ಟಿ, ಎಂದಿಗೂ ನಡೆಯಬಾರದ್ದು ನಡೆದ ಬಳಿಕ ಚಿತ್ರೋದ್ಯಮದ ಅಧ್ಯಯನಕ್ಕಾಗಿ, ವರದಿಯನ್ನು ಸಿದ್ಧಪಡಿಸಲು, ಪರಿಹಾರಗಳನ್ನು ಸೂಚಿಸಲು ಮತ್ತು ಕ್ರಮಗಳನ್ನು ಶಿಫಾರಸು ಮಾಡಲು ಸರಕಾರವು ನ್ಯಾ.ಹೇಮಾ ಸಮಿತಿಯನ್ನು ರಚಿಸಿತ್ತು. ವರದಿಯಲ್ಲಿ ಉಲ್ಲೇಖಿಸಲಾಗಿರುವ ಸಲಹೆಗಳು ಮತ್ತು ಪರಿಹಾರಗಳನ್ನು ಸಾರ್ವತ್ರಿಕವಾಗಿ ಸ್ವಾಗತಿಸುತ್ತೇವೆ. ಅವುಗಳನ್ನು ಅನುಷ್ಠಾನಿಸಲು ಚಿತ್ರೋದ್ಯಮದ ಎಲ್ಲ ಸಂಘಗಳು ಒಟ್ಟಾಗಿ ನಿಲ್ಲುವ ಸಮಯವೀಗ ಬಂದಿದೆ ಎಂದು ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Naufal

contributor

Byline - ವಾರ್ತಾಭಾರತಿ

contributor

Similar News