ಗುಜರಾತ್‌| ಪ್ರವಾಹದಲ್ಲಿ ಸಿಲುಕಿದ ಯಾತ್ರಾರ್ಥಿಗಳಿದ್ದ ಬಸ್; ರಕ್ಷಣಾ ಕಾರ್ಯಾಚರಣೆಯಲ್ಲಿ NDRF ಜೊತೆ ಕೈಜೋಡಿಸಿದ ಸ್ಥಳೀಯ ಮುಸ್ಲಿಮರು

Update: 2024-09-28 07:26 GMT

Photo: PTI

ಗುಜರಾತ್‌: ಭಾವನಗರ ಜಿಲ್ಲೆಯಲ್ಲಿ ತಮಿಳುನಾಡು ಮತ್ತು ಪುದುಚೇರಿಯ ಯಾತ್ರಾರ್ಥಿಗಳಿದ್ದ ಐಷಾರಾಮಿ ಬಸ್ ಪ್ರವಾಹಕ್ಕೆ ಸಿಲುಕಿದ್ದು, 27 ಯಾತ್ರಿಗಳು ಸೇರಿದಂತೆ ಒಟ್ಟು 29 ಜನರನ್ನು ಸ್ಥಳೀಯ ಮುಸ್ಲಿಮರು ಮತ್ತು ಎನ್ ಡಿಆರ್ ಎಫ್ ತಂಡ ರಕ್ಷಣೆ ನಡೆಸಿದೆ.

ಗುರುವಾರ ರಾತ್ರಿ ಘಟನೆ ನಡೆದಿದ್ದು, ಭಾವನಗರದಿಂದ ಆಗ್ನೇಯಕ್ಕೆ 24 ಕಿಮೀ ದೂರದಲ್ಲಿರುವ ಕರಾವಳಿ ಕೊಲಿಯಾಕ್ ಗ್ರಾಮದ ಬಳಿ ಮಾಲೇಶ್ರೀ ನದಿ ತುಂಬಿ ಹರಿದು ಪ್ರವಾಹದ ಸ್ಥಿತಿ ನಿರ್ಮಾಣವಾಗಿತ್ತು.

ತಮಿಳುನಾಡಿನಿಂದ ಬಂದಿದ್ದ ಯಾತ್ರಾರ್ಥಿಗಳು ರಾಜಸ್ಥಾನ ಮತ್ತು ಗುಜರಾತ್‌ಗೆ 10 ದಿನಗಳ ಸುದೀರ್ಘ ಪ್ರವಾಸದಲ್ಲಿದ್ದರು. ನಿಷ್ಕಲಂಕ್ ಮಹಾದೇವ ದೇವಸ್ಥಾನದಲ್ಲಿ ದರ್ಶನ ಪಡೆದು ಸೋಮನಾಥಕ್ಕೆ ತೆರಳುತ್ತಿದ್ದಾಗ ಘಟನೆ ನಡೆದಿದೆ.

ಪ್ರವಾಹದಲ್ಲಿ ಬಸ್ ಸಿಲುಕಿರುವುದನ್ನು ಕಂಡು ಸ್ಥಳೀಯ ಮುಸ್ಲಿಮರು ಮಿನಿ-ಟ್ರಕ್‌ನಲ್ಲಿ ಬಸ್ ಬಳಿ ತೆರಳಿ ಬಸ್‌ನ ಹಿಂದಿನ ಕಿಟಕಿಯನ್ನು ಒಡೆದು ಎಲ್ಲಾ 27 ಯಾತ್ರಾರ್ಥಿಗಳನ್ನು ಬಸ್‌ನಿಂದ ರಕ್ಷಿಸಿದ್ದಾರೆ. ಆದರೆ ಮಿನಿಟ್ರಕ್ ಕೂಡ ಪ್ರವಾಹಕ್ಕೆ ಸಿಲುಕಿತ್ತು. ಈ ವೇಳೆ ದೊಡ್ಡ ಟ್ರಕ್ ಮೂಲಕ 29 ಜನರನ್ನು ಸುರಕ್ಷಿತ ಸ್ಥಳಕ್ಕೆ ಕರೆತರಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News