ಏರ್ ಇಂಡಿಯಾದಲ್ಲಿ ಸಹಪ್ರಯಾಣಿಕನ ಮೇಲೆ ಮೂತ್ರ ಮಾಡಿದ ವ್ಯಕ್ತಿಗೆ ಒಂದು ತಿಂಗಳು ಪ್ರಯಾಣ ನಿಷೇಧ

Update: 2025-04-10 20:43 IST
ಏರ್ ಇಂಡಿಯಾದಲ್ಲಿ ಸಹಪ್ರಯಾಣಿಕನ ಮೇಲೆ ಮೂತ್ರ ಮಾಡಿದ ವ್ಯಕ್ತಿಗೆ ಒಂದು ತಿಂಗಳು ಪ್ರಯಾಣ ನಿಷೇಧ

ಏರ್ ಇಂಡಿಯಾ ವಿಮಾನ | PC : PTI 

  • whatsapp icon

ಹೊಸದಿಲ್ಲಿ: ದಿಲ್ಲಿಯಿಂದ ಬ್ಯಾಂಕಾಕ್‌ ಗೆ ಪ್ರಯಾಣಿಸುತ್ತಿದ್ದ ಏರ್ ಇಂಡಿಯಾ ವಿಮಾನದಲ್ಲಿ ಸಹಪಯಾಣಿಕರೊಬ್ಬರ ಮೇಲೆ ಮೂತ್ರ ಮಾಡಿದ ಆರೋಪದಲ್ಲಿ ಓರ್ವ ಪ್ರಯಾಣಿಕನಿಗೆ ವಿಮಾನಯಾನ ಸಂಸ್ಥೆಯು ಒಂದು ತಿಂಗಳ ಪ್ರಯಾಣ ನಿಷೇಧವನ್ನು ವಿಧಿಸಿದೆ.

ಬುಧವಾರ ವಿಮಾನದ ಬಿಝ್ನೆಸ್ ಕ್ಲಾಸ್‌ ನಲ್ಲಿ ಈ ಘಟನೆ ನಡೆದಿದೆ. ಘಟನೆಯ ಬಳಿಕ ಆರೋಪಿಯು ತನ್ನ ತಪ್ಪಿಗೆ ಕ್ಷಮೆ ಕೋರಿದ ಎನ್ನಲಾಗಿದೆ.

ಸಂತ್ರಸ್ತನನ್ನು ಬ್ರಿಜ್‌ಸ್ಟೋನ್ ಇಂಡಿಯಾದ ಆಡಳಿತ ನಿರ್ದೇಶಕ ಹಿರೋಶಿ ಯೊಶಿಝನೆ ಎಂಬುದಾಗಿ ಗುರುತಿಸಲಾಗಿದೆ.

ಘಟನೆಯನ್ನು ಏರ್ ಇಂಡಿಯಾ ವಕ್ತಾರರೊಬ್ಬರು ಖಚಿತಪಡಿಸಿದ್ದಾರೆ. ವಿಮಾನವು ಬ್ಯಾಂಕಾಕ್‌ನಲ್ಲಿ ಇಳಿಯುತ್ತಿದ್ದಾಗ ಈ ಘಟನೆ ನಡೆದಿದೆ ಎಂಬುದಾಗಿ ಅವರು ಹೇಳಿದ್ದಾರೆ.

ಆರೋಪಿ ತುಷಾರ್ ಮಸಂದ್‌ನನ್ನು ತಕ್ಷಣ ಅಲ್ಲಿಂದ ಸ್ಥಳಾಂತರಿಸಲಾಯಿತು ಮತ್ತು ಎಚ್ಚರಿಕೆ ನೀಡಲಾಯಿತು.

ಈ ಬಗ್ಗೆ ಸಂತ್ರಸ್ತ ವ್ಯಕ್ತಿಯು ವಿಮಾನಯಾನ ಕಂಪೆನಿಗೆ ಔಪಚಾರಿಕ ದೂರು ಸಲ್ಲಿಸಿಲ್ಲ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News