ಮಣಿಪುರ: ಎನ್ಐಎಯಿಂದ ಶಂಕಿತ ಭಯೋತ್ಪಾದಕನ ಬಂಧನ

Update: 2023-09-23 22:08 IST
ಮಣಿಪುರ: ಎನ್ಐಎಯಿಂದ ಶಂಕಿತ ಭಯೋತ್ಪಾದಕನ ಬಂಧನ

ಸಾಂದರ್ಭಿಕ ಚಿತ್ರ

  • whatsapp icon

ಇಂಫಾಲ: ಮ್ಯಾನ್ಮಾರ್ ಮೂಲದ ಬಂಡುಕೋರರ ಗುಂಪಿನೊಂದಿಗೆ ನಂಟು ಹೊಂದಿದ ಆರೋಪದಲ್ಲಿ ಎನ್ಐಎ ಶಂಕಿತ ಭಯೋತ್ಪಾದಕನೋರ್ವನನ್ನು ಬಂಧಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮಣಿಪುರದಲ್ಲಿ ಪ್ರಸಕ್ತ ನಡೆಯುತ್ತಿರುವ ಜನಾಂಗೀಯ ಹಿಂಸಾಚಾರವನ್ನು ಬಳಸಿಕೊಂಡು ಭಾರತದ ವಿರುದ್ಧ ಯುದ್ಧ ಸಾರಲು ಈತ ಸಂಚು ರೂಪಿಸಿದ್ದಾನೆ ಎಂದು ಆರೋಪಿಸಲಾಗಿದೆ. ಬಂಧಿತನಾಗಿರುವ ಶಂಕಿತ ಭಯೋತ್ಪಾದಕನನ್ನು ಆನಂದ್ ಸಿಂಗ್ ಎಂದು ಗುರುತಿಸಲಾಗಿದೆ.

ಈತನನ್ನು ಮಣಿಪುರದಿಂದ ಬಂಧಿಸಲಾಗಿದೆ. ಅನಂತರ ವಿಚಾರಣೆ ನಡೆಸಲು ದಿಲ್ಲಿಗೆ ತರಲಾಗಿದೆ ಎಂದು ಎನ್ಐಎ ತಿಳಿಸಿದೆ. ಪೊಲೀಸ್ ಶಸ್ತ್ರಾಸ್ತ್ರಗಾರದಿಂದ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಂಡ ಆರೋಪದಲ್ಲಿ ಬಂಧಿತರಾಗಿರುವ ಐವರಲ್ಲಿ ಸಿಂಗ್ ಕೂಡ ಓರ್ವ. ಐವರ ಬಂಧನ ಬಹುಸಂಖ್ಯಾತ ಸಮುದಾಯದ ಪ್ರತಿಭಟನೆಗೆ ಕಾರಣವಾಗಿತ್ತು.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ವಾರ್ತಾಭಾರತಿ

contributor

Similar News