‘ಅಗ್ನಿಪಥ’ದ ಮೂಲಕ ಯುವಜನರ ಕನಸುಗಳನ್ನು ಭಗ್ನಗೊಳಿಸಿದ ಮೋದಿ ಸರಕಾರ : ರಾಹುಲ್ ಕಿಡಿ

Update: 2023-12-27 21:36 IST
‘ಅಗ್ನಿಪಥ’ದ ಮೂಲಕ ಯುವಜನರ ಕನಸುಗಳನ್ನು ಭಗ್ನಗೊಳಿಸಿದ ಮೋದಿ ಸರಕಾರ : ರಾಹುಲ್ ಕಿಡಿ

ರಾಹುಲ್ ಗಾಂಧಿ | Photo: PTI 

  • whatsapp icon

ಹೊಸದಿಲ್ಲಿ: ಅಗ್ನಿಪಥ ಸೇನಾ ನೇಮಕಾತಿ ಯೋಜನೆಯನ್ನು ಜಾರಿಗೊಳಿಸುವ ಮೂಲಕ ಮೋದಿ ಸರಕಾರವು ಅಸಂಖ್ಯಾತ ಯುವಜನತೆಯ ಕನಸುಗಳನ್ನು ಭಗ್ನಗೊಳಿಸಿದೆಯೆಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮಂಗಳವಾರ ಆಪಾದಿಸಿದ್ದಾರೆ. ನಿರುದ್ಯೋಗದ ಸಮಸ್ಯೆ ಬಗ್ಗೆ ‘ದೇಶದ ಬೀದಿಗಳಿಂದ ಸಂಸತ್’ವರೆಗೆ ಧ್ವನಿಯೆತ್ತುವವರಿಗೆ ತನ್ನ ಬೆಂಬಲವನ್ನು ಅವರು ವ್ಯಕ್ತಪಡಿಸಿದ್ದಾರೆ.

ಬಿಹಾರದ ಚಂಪಾರಣ್ ಜಿಲ್ಲೆಯವರೆನ್ನಲಾದ ಯುವಜನರ ಜೊತೆಗೆ ತಾನಿರುವ ಭಾವಚಿತ್ರದೊಂದಿಗೆ ಅವರು ಈ ಹೇಳಿಕೆಯನ್ನು ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ.

‘‘ ಸೇನೆಗೆ ತಾತ್ಕಾಲಿಕ ನೇಮಕಾತಿಗೆ ದೊರಕಿಸುವ ಅಗ್ನಿವೀರ್ ಯೋಜನೆಯ ಮೂಲಕ ಭೂಸೇನೆ ಹಾಗೂ ವಾಯುಪಡೆಯಲ್ಲಿ ಖಾಯಂ ನೇಮಕಾತಿ ಪ್ರಕ್ರಿಯೆಯನ್ನು ರದ್ದುಪಡಿಸಿ, ಅಸಂಖ್ಯಾತ ಯುವಜನರ ಕನಸುಗಳನ್ನು ಕೇಂದ್ರ ಸರಕಾರವು ನಾಶಪಡಿಸಿದೆ’’ ಎಂದು ರಾಹುಲ್ ಅವರು ಪೋಸ್ಟ್ನಲ್ಲಿ ತಿಳಿಸಿದ್ದಾರೆ.

ಸತ್ಯಾಗ್ರಹದ ನೆಲವಾದ ಚಂಪಾರಣ್ನಿಂದ ದಿಲ್ಲಿಯನ್ನು ತಲುಪಲು 1100 ಕಿ.ಮೀ. ಪಾದಯಾತ್ರೆ ನಡೆಸಿದ ಯುವಜನರ ಹೋರಾಟವನ್ನು ಯಾವುದೇ ಮಾಧ್ಯಮಗಳಲ್ಲಿ ತೋರಿಸದೆ ಇರುವುದು ವಿಷಾದನೀಯವೆಂದು ಅವರು ಹೇಳಿದ್ದಾರೆ.

ಬೀದಿಗಳಿಂದ ಸಂಸತ್ನವರೆಗೆ ನಿರುದ್ಯೋಗ ಸಮಸ್ಯೆ ವಿರುದ್ಧ ಧ್ವನಿಯೆತ್ತುವ ಯುವಜನರ ಜೊತೆಗೆ ನಾವಿದ್ದೇವೆ ಎಂದು ರಾಹುಲ್ ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News