26/11ರ ಮುಂಬೈ ದಾಳಿ ಪ್ರಕರಣ ; ವಿಶೇಷ ಸಾರ್ವಜನಿಕ ಅಭಿಯೋಜಕರಾಗಿ ನರೇಂದರ್ ಮಾನ್ ನೇಮಕ

Update: 2025-04-10 10:54 IST
26/11ರ ಮುಂಬೈ ದಾಳಿ ಪ್ರಕರಣ ; ವಿಶೇಷ ಸಾರ್ವಜನಿಕ ಅಭಿಯೋಜಕರಾಗಿ ನರೇಂದರ್ ಮಾನ್ ನೇಮಕ

PC | ndtv.in

  • whatsapp icon

Modi govt appoints Narender Mann Special Public Prosecutor as 26/11 attack accused awaits justiceಹೊಸದಿಲ್ಲಿ: 2008ರ ನವೆಂಬರ್ 26ರಂದು ಮುಂಬೈ ಮೇಲೆ ನಡೆದ ದಾಳಿ ಪ್ರಕರಣದ ವಿಚಾರಣೆಗಾಗಿ ವಿಶೇಷ ಸಾರ್ವಜನಿಕ ಅಭಿಯೋಜಕರಾಗಿ ನರೇಂದರ್ ಮಾನ್ ನೇಮಕ ಅವರನ್ನು ನೇಮಕ ಮಾಡಿ ಕೇಂದ್ರ ಸರಕಾರ ಆದೇಶ ಹೊರಡಿಸಿದೆ.

ಈ ಕುರಿತು ಗಜೆಟ್ ಅಧಿಸೂಚನೆ ಹೊರಡಿಸಿರುವ ಕೇಂದ್ರ ಸರಕಾರ, ಎನ್ ಐ ಎ ವಿಶೇಷ ನ್ಯಾಯಾಲಯವು ಪ್ರಕರಣದ ಆರೋಪಿಗಳಾಗಿರುವ ತಹವೂರ್ ಹುಸೇನ್ ರಾಣಾ ಮತ್ತು ಡೇವಿಡ್ ಕೋಲ್ಮನ್ ಹೆಡ್ಲಿ ವಿರುದ್ಧದ ವಿಚಾರಣೆಗಳಿಗೆ ಮೂರು ವರ್ಷಗಳ ಗಡುವು ನೀಡಿದೆ.

ಪಾಕಿಸ್ತಾನಿ ಮೂಲದ 64 ವರ್ಷದ ಕೆನಡಾದ ಪ್ರಜೆ ರಾಣಾನನ್ನು ಲಾಸ್ ಏಂಜಲೀಸ್‌ನ ಮೆಟ್ರೋಪಾಲಿಟನ್ ಬಂಧನ ಕೇಂದ್ರದಲ್ಲಿ ಇರಿಸಲಾಗಿತ್ತು. ಮುಂಬೈ ಭಯೋತ್ಪಾದನಾ ದಾಳಿಯ ಆರೋಪಿಯಯಾಗಿರುವ ತಹವೂರ್ ಹುಸೇನ್ ರಾಣಾನನ್ನು ಈಗಾಗಲೇ ವಿಶೇಷ ವಿಮಾನದಲ್ಲಿ ಭಾರತಕ್ಕೆ ಕರೆತರಲಾಗುತ್ತಿದೆ. ಅಮೆರಿಕದ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳು ರಾಣಾ ನ ಅರ್ಜಿಯನ್ನು ತಿರಸ್ಕರಿಸಿದ್ದರಿಂದ ಗಡೀಪಾರಿನಿಂದ ತಪ್ಪಿಸಿಕೊಳ್ಳುವ ಆತನ ಕೊನೆಯ ಪ್ರಯತ್ನ ವಿಫಲವಾದವು. ಆತ ಇಂದು ಭಾರತ ತಲುಪುವ ನಿರೀಕ್ಷೆಯಿದೆ.

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News