ಮನೀಷ್ ಸಿಸೋಡಿಯ ನ್ಯಾಯಾಂಗ ಬಂಧನ ನ. 22ರ ವರೆಗೆ ವಿಸ್ತರಣೆ

Update: 2023-10-19 21:42 IST
ಮನೀಷ್ ಸಿಸೋಡಿಯ ನ್ಯಾಯಾಂಗ ಬಂಧನ ನ. 22ರ ವರೆಗೆ ವಿಸ್ತರಣೆ

Photo: PTI

  • whatsapp icon

ಹೊಸದಿಲ್ಲಿ: ದಿಲ್ಲಿ ಅಬಕಾರಿ ನೀತಿ ಪ್ರಕರಣದಲ್ಲಿ ದಿಲ್ಲಿ ಮಾಜಿ ಉಪ ಮುಖ್ಯಮಂತ್ರಿ ಮನೀಷ್ ಸಿಸೋಡಿಯಾ ಅವರ ನ್ಯಾಯಾಂಗ ಬಂಧನವನ್ನು ದಿಲ್ಲಿ ನ್ಯಾಯಾಲಯ ಗುರುವಾರ ನವೆಂಬರ್ 22ರ ವರೆಗೆ ವಿಸ್ತರಿಸಿದೆ.

ಸಿಬಿಐ ಸಿಸೋಡಿಯಾ ಅವರನ್ನು ಗುರುವಾರ ನ್ಯಾಯಾಲಯದ ಮುಂದೆ ಹಾಜರುಪಡಿಸಿತು. ಸಿಬಿಐಗೆ ಕೆಲವು ನಿರ್ದೇಶನಗಳನ್ನು ನೀಡಿದ ಬಳಿಕ ನ್ಯಾಯಾಲಯ ಪ್ರಕರಣದ ಮುಂದಿನ ವಿಚಾರಣೆಯನ್ನು ನವೆಂಬರ್ 22ಕ್ಕೆ ನಿಗದಿಪಡಿಸಿತು. ಅಲ್ಲಿವರೆಗೆ ಸಿಸೋಡಿಯಾ ಅವರು ನ್ಯಾಯಾಂಗ ಬಂಧನವನ್ನು ವಿಸ್ತರಿಸಿತು.

ಪ್ರಕರಣದಲ್ಲಿ ಆರೋಪಿಯ ವಿರುದ್ಧದ ಮೂರು ಆರೋಪ ಪಟ್ಟಿಗಳಿಗೆ ಸಂಬಂಧಿಸಿದ ಎಲ್ಲಾ ದಾಖಲೆಗಳ ಪ್ರತಿಯನ್ನು ಒದಗಿಸುವಂತೆ ಸಿಬಿಐಗೆ ನ್ಯಾಯಾಲಯ ನಿರ್ದೇಶಿಸಿತು. ಅಲ್ಲದೆ, ಸಿಬಿಐಯ ಕೇಂದ್ರ ಕಚೇರಿಯ ಕೊಠಡಿಯಲ್ಲಿ ಇರಿಸಲಾಗಿರುವ ಆರೋಪಿಗೆ ಸಂಬಂಧಿಸಿದ ದಾಖಲೆಗಳನ್ನು ಪರಿಶೀಲಿಸಲು ಅರ್ಜಿ ಸಲ್ಲಿಸುವಂತೆ ನ್ಯಾಯಾಲಯ ತನಿಖಾ ಅಧಿಕಾರಿಗೆ ಸೂಚಿಸಿತು.

ಆರೋಪಿ ಪರ ವಕೀಲರಿಗೆ ಅಪರಾಹ್ನ 2 ಗಂಟೆಯಿಂದ 7 ಗಂಟೆ ವರೆಗೆ ದಾಖಲೆಗಳನ್ನು ಪರಿಶೀಲಿಸಲು ಸಮಯಾವಕಾಶ ನೀಡುವಂತೆ ಕೂಡ ನ್ಯಾಯಾಲಯ ಸಿಬಿಐಗೆ ನಿರ್ದೇಶಿಸಿತು.

ಸುಪ್ರೀಂ ಕೋರ್ಟ್‌ನಲ್ಲಿ ಸಿಸೋಡಿಯಾ ಅವರ ಜಾಮೀನು ಅರ್ಜಿ ಬಾಕಿ ಇರುವ ಸಂದರ್ಭದಲ್ಲೇ ದಿಲ್ಲಿ ನ್ಯಾಯಾಲಯ ಅವರ ನ್ಯಾಯಾಂಗ ಬಂಧನವನ್ನು ವಿಸ್ತರಿಸಿದೆ. 

Tags:    

Writer - ವಾರ್ತಾಭಾರತಿ

contributor

Editor - Naufal

contributor

Byline - ವಾರ್ತಾಭಾರತಿ

contributor

Similar News