ಗುಜರಾತ್ ನ ಲೋಕಸಭಾ ಕ್ಷೇತ್ರಗಳಲ್ಲಿ 4 ಲಕ್ಷಕ್ಕೂ ಅಧಿಕ ನೋಟಾ ಚಲಾವಣೆ

Update: 2024-06-05 16:39 GMT

ಸಾಂದರ್ಭಿಕ ಚಿತ್ರ

ಗಾಂಧಿನಗರ : ಬಿಜೆಪಿಯ ಭದ್ರಕೋಟೆಯಾದ ಗುಜರಾತ್ನ ಲೋಕಸಭಾ ಕ್ಷೇತ್ರಗಳಲ್ಲಿ ಒಟ್ಟು 4 ಲಕ್ಷಕ್ಕೂ ಅಧಿಕ ನೋಟಾ ಚಲಾವಣೆಯಾಗಿದೆ. ಇದು ಆಡಳಿತಾರೂಢ ಪಕ್ಷದ ಕುರಿತು ಅಸಮಾಧಾನ ಹೆಚ್ಚುತ್ತಿರುವುದನ್ನು ಸೂಚಿಸಿದೆ.

ಗುಜರಾತ್ನ ಇಬ್ಬರು ಪ್ರಮುಖ ಬಿಜೆಪಿ ಅಭ್ಯರ್ಥಿಗಳಾದ ರಾಜ್ಯಾಧ್ಯಕ್ಷ ಸಿ.ಆರ್. ಪಾಟಿಲ್ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಅತಿ ಹೆಚ್ಚು ಮತಗಳ ಅಂತರದ ಮೂಲಕ ಭರ್ಜರಿ ಜಯ ಗಳಿಸಿದ್ದಾರೆ. ಆದರೆ, ಅವರ ಕ್ಷೇತ್ರಗಳಲ್ಲಿ ಗಣನೀಯ ಸಂಖ್ಯೆಯ ನೋಟಾಗಳು ಕೂಡ ಚಲಾವಣೆಯಾಗಿವೆ.

ಗುಜರಾತ್ನಲ್ಲಿ ಒಟ್ಟು 4,60341 ನೋಟಾಗಳು ಚಲಾವಣೆಯಾಗಿವೆ. ಇದು ಒಟ್ಟು ಮತಗಳ ಶೇ. 1.60. ಪಕ್ಷೇತರ ಅಭ್ಯರ್ಥಿಗಳು ಪಡೆದ ಮತಗಳಿಗೆ ಹೋಲಿಸಿದರೆ ಶೇ. 1.89.

ಅಮಿತ್ ಶಾ ಅವರ ಕ್ಷೇತ್ರ ಗಾಂಧಿನಗರದಲ್ಲಿ 22,005 ನೋಟಾಗಳು ಚಲಾವಣೆಯಾಗಿವೆ. ಸಿ.ಆರ್. ಪಾಟೀಲ್ ಅವರ ಕ್ಷೇತ್ರ ನವ್ಸಾರಿಯಲ್ಲಿ 20,462 ನೋಟಾಗಳು ದಾಖಲಾಗಿವೆ.

ದಾಹೋದ್ ಕ್ಷೇತ್ರದಲ್ಲಿ ಅತ್ಯಧಿಕ 34,938 ನೋಟಾಗಳು, ಅಹ್ಮದಾಬಾದ್ ಪೂರ್ವದಲ್ಲಿ ಅತಿ ಕಡಿಮೆ 10,503 ನೋಟಾಗಳು ದಾಖಲಾಗಿವೆ.

ಅಹ್ಮದಾಬಾದ್ ಪಶ್ಚಿಮ (14,007), ರಾಜ್ಕೋಟ್ (15,922) ಹಾಗೂ ವಡೋದರಾ (18,388)ನಲ್ಲಿ ಗಣನೀಯ ಪ್ರಮಾಣದಲ್ಲಿ ನೋಟಾಗಳು ಚಲಾವಣೆಯಾಗಿವೆ. 

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News