ಗುಜರಾತ್| ಸೋಮನಾಥ ದೇವಸ್ಥಾನದ ಬಳಿ ಒತ್ತುವರಿ ತೆರವು ಕಾರ್ಯಾಚರಣೆ; ಮಸೀದಿ, ಮಂದಿರ, ಮನೆಗಳ ನೆಲಸಮ

Update: 2024-09-29 11:38 GMT

Photo: X/ @HateDetectors

ಗುಜರಾತ್: ಗುಜರಾತ್ ನ ಗಿರ್ ಸೋಮನಾಥ ಜಿಲ್ಲೆಯ ಸೋಮನಾಥ ದೇವಾಲಯದ ಸಮೀಪವಿರುವ ಪ್ರಭಾಸ್ ಪಟಾನ್ ಪ್ರದೇಶದಲ್ಲಿ ಭೂ ಒತ್ತುವರಿ ಆರೋಪದ ಮೇಲೆ ಅಧಿಕಾರಿಗಳು 9 ಮಸೀದಿಗಳು, ದೇಗುಲಗಳು ಮತ್ತು 45 ಮನೆಗಳನ್ನು ಕೆಡವಿದ್ದಾರೆ ಎಂದು Hindustan Times ವರದಿ ಮಾಡಿದೆ.

ತೆರವು ಕಾರ್ಯಾಚರಣೆ ಶನಿವಾರ ಮುಂಜಾನೆ ಆರಂಭಿಸಿದ್ದು, ಆರು ಗಂಟೆಗಳಿಗೂ ಹೆಚ್ಚು ಕಾಲ ಮುಂದುವರಿದಿದೆ. 60 ಕೋಟಿ ಮೌಲ್ಯದ 15 ಹೆಕ್ಟೇರ್ ಭೂಮಿಯಲ್ಲಿನ ಒತ್ತುವರಿಯನ್ನು ತೆರವುಗೊಳಿಸಲಾಗಿದೆ. 40 ಕೊಠಡಿಗಳನ್ನು ಹೊಂದಿರುವ ಅಕ್ರಮ ಲಾಡ್ಜ್ ಅನ್ನು ಕೂಡ ತೆರವು ಕಾರ್ಯಾಚರಣೆಯ ಭಾಗವಾಗಿ ಕೆಡವಾಲಾಗಿದೆ ಎಂದು ಜಿಲ್ಲಾಧಿಕಾರಿ ಡಿಡಿ ಜಡೇಜಾ ತಿಳಿಸಿದ್ದಾರೆ.

ಮುನ್ನೆಚ್ಚರಿಕೆ ಕ್ರಮವಾಗಿ ಸೋಮನಾಥ್ ಮತ್ತು ವೆರಾವಲ್ ಪಟ್ಟಣಗಳಲ್ಲಿ ನೂರಾರು ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಒತ್ತುವರಿ ತೆರವು ಕಾರ್ಯಾಚರಣೆ ವೇಳೆ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡಲು 150 ಜನರನ್ನು ಬಂಧಿಸಲಾಗಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಮನೋಹರಸಿನ್ಹ ಹೇಳಿದ್ದಾರೆ.

ಸೋಮನಾಥ ಟ್ರಸ್ಟ್ ಗೆ ಸೇರಿದ ಪ್ರದೇಶ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಕ್ಕೆ ಸೇರಿದ ಸ್ಥಳದ ಭೂ ಒತ್ತುವರಿಯನ್ನು ತೆರವುಗೊಳಿಸಲಾಗಿದೆ. ಒತ್ತುವರಿಯ ವಿರುದ್ಧ ನ್ಯಾಯಾಲಯದ ತೀರ್ಪುಗಳ ಬಳಿಕ ಕಾರ್ಯಾಚರಣೆ ನಡೆಸಲಾಗಿದೆ ಎಂದು ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News