'ಇಂಡೆಕ್ಸ್ ಆಫ್ ಸೆನ್ಸಾರ್‌ಶಿಪ್' ನ ಅಭಿವ್ಯಕ್ತಿ ಸ್ವಾತಂತ್ರ್ಯ ಪ್ರಶಸ್ತಿಗೆ ಮುಹಮ್ಮದ್ ಝುಬೈರ್ ನಾಮನಿರ್ದೇಶನ

Update: 2023-10-04 12:31 GMT

ಮುಹಮ್ಮದ್ ಝುಬೈರ್

ಬೆಂಗಳೂರು: ಫ್ಯಾಕ್ಟ್ ಚೆಕ್ ಮಾಡುವ ವೆಬ್ಸೈಟ್ ಆಲ್ಟ್ ನ್ಯೂಸ್ ನ ಸಹ-ಸಂಸ್ಥಾಪಕ ಮತ್ತು ಪತ್ರಕರ್ತ ಮುಹಮ್ಮದ್ ಝುಬೈರ್ ಅವರು ಲಂಡನ್ ಮೂಲದ ʼಇಂಡೆಕ್ಸ್ ಆಫ್ ಸೆನ್ಸಾರ್ಶಿಪ್ʼ (Index on Censorship) ನ ಅಭಿವ್ಯಕ್ತಿ ಸ್ವಾತಂತ್ರ್ಯ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿದ್ದಾರೆ.

ʼಇಂಡೆಕ್ಸ್ ಆಫ್ ಸೆನ್ಸಾರ್ಶಿಪ್ʼ ನ ಅಭಿವ್ಯಕ್ತಿ ಸ್ವಾತಂತ್ರ್ಯ ಪ್ರಶಸ್ತಿಯು ವಿಶ್ವದ ಯಾವುದೇ ಭಾಗದಲ್ಲಿ ಸೆನ್ಸಾರ್ಶಿಪ್ ವಿರುದ್ಧದ ಹೋರಾಟದಲ್ಲಿ ಗಮನಾರ್ಹ ಪರಿಣಾಮ ಬೀರಿದವರನ್ನು ಗುರುತಿಸಿ ನೀಡಲಾಗುತ್ತದೆ.

ಕಲೆ, ಪ್ರಚಾರ, ಪತ್ರಿಕೋದ್ಯಮ ಮತ್ತು ಟ್ರಸ್ಟಿ ಎಂಬ ನಾಲ್ಕು ವಿಭಾಗಗಳಲ್ಲಿ ಪ್ರಶಸ್ತಿ ವಿಜೇತರನ್ನು ಆಯ್ಕೆ ಮಾಡಲಾಗುತ್ತದೆ.

ವಿಜೇತರನ್ನು ಲಂಡನ್ ನಲ್ಲಿ ಗಾಲಾ ಆಚರಣೆಯಲ್ಲಿ ಗೌರವಿಸಲಾಗುತ್ತದೆ.

"ಸತ್ಯ-ಪರಿಶೀಲನಾ ವೇದಿಕೆ ಆಲ್ಟ್ ನ್ಯೂಸ್ ಅನ್ನು ಸ್ಥಾಪಿಸಿ ಮುಹಮ್ಮದ್ ಝುಬೈರ್ ಅವರು ಆಡಳಿತ ಪಕ್ಷದ ಪ್ರಭಾವಿ ಸದಸ್ಯರು ಪ್ರಚಾರ ಮಾಡಿದ ಸುಳ್ಳು/ತಿರುಚಿದ ಮಾಹಿತಿಯನ್ನು ಬಯಲಿಗೆಳೆದ ಬಳಿಕ ಬೆದರಿಕೆಗಳನ್ನು ಎದುರಿಸಿದ್ದಾರೆ" ಎಂದು ʼಇಂಡೆಕ್ಸ್ ಆಫ್ ಸೆನ್ಸಾರ್ಶಿಪ್ʼ ಪ್ರಕಟನೆ ತಿಳಿಸಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News