ನೆಹರೂ ಸಂವಿಧಾನಕ್ಕೆ ಹಿಂಬಾಗಿಲ ಮೂಲಕ ಬದಲಾವಣೆ ಮಾಡಿದ್ದರು : ಪ್ರಧಾನಿ ಮೋದಿ
Update: 2024-12-14 14:44 GMT
ಹೊಸದಿಲ್ಲಿ: ಜವಾಹರ ಲಾಲ್ ನೆಹರೂ ಸಂವಿಧಾನಕ್ಕೆ ಹಿಂಬಾಗಿಲ ಮೂಲಕ ಬದಲಾವಣೆ ಮಾಡಿದ್ದರು ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿಗೆ ತಿರುಗೇಟು ನೀಡಿದರು.
ಲೋಕಸಭೆಯಲ್ಲಿ ನಡೆದ ಸಂವಿಧಾನದ ಬಗೆಗಿನ ಚರ್ಚೆಯಲ್ಲಿ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ಭಾಷಣಗಳಿಗೆ ಪ್ರತ್ಯುತ್ತರ ನೀಡಿದ ಪ್ರಧಾನಿ ಮೋದಿ, ಲೋಕಸಭೆಯನ್ನು ಬದಿಗೆ ತಳ್ಳಿ ಸಂವಿಧಾನದ ವಿಧಿ 35ಎಗೆ ಕಾಂಗ್ರೆಸ್ ತಿದ್ದುಪಡಿ ಮಾಡಿತ್ತು ಎಂದು ಆರೋಪಿಸಿದರು. ತುರ್ತು ಪರಿಸ್ಥಿತಿ ಜಾರಿ ಮಾಡಿದ ಪಾಪವನ್ನು ಕಾಂಗ್ರೆಸ್ ಎಂದಿಗೂ ತೊಳೆದುಕೊಳ್ಳಲು ಸಾಧ್ಯವಿಲ್ಲ ಎಂದೂ ಅವರು ವಾಗ್ದಾಳಿ ನಡೆಸಿದರು.
ಜಗತ್ತಿನಾದ್ಯಂತ ಇರುವ ದೇಶಗಳಿಗೆ ಭಾರತದ ಸಂವಿಧಾನ ಸ್ಫೂರ್ತಿಯಾಗಿದೆ ಎಂದೂ ಅವರು ಹೇಳಿದರು.
ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅವರ ಅವಧಿಯಲ್ಲಿ ಪ್ರಧಾನ ಮಂತ್ರಿ ಕಾರ್ಯಾಲಯಕ್ಕಿಂತ ರಾಷ್ಟ್ರೀಯ ಸಲಹಾ ಸಮಿತಿಗೆ ಹೆಚ್ಚು ಆದ್ಯತೆ ನೀಡಲಾಗಿತ್ತು ಎಂದೂ ಅವರು ದೂರಿದರು.