ನೆಹರೂ ಮಾದರಿ ವಿಫಲಗೊಂಡಿದೆ, ನಾವದನ್ನು ಸರಿಪಡಿಸಲು 2014ರಿಂದ ಪ್ರಯತ್ನಿಸುತ್ತಿದ್ದೇವೆ: ಎಸ್. ಜೈಶಂಕರ್

Update: 2024-12-15 18:08 GMT

ಎಸ್‌.ಜೈಶಂಕರ್ | PC : PTI

ಹೊಸದಿಲ್ಲಿ: ನೆಹರೂ ಅವರ ಅಭಿವೃದ್ಧಿ ಮಾದರಿ ಅನಿವಾರ್ಯವಾಗಿ ನೆಹರೂ ವಿದೇಶಾಂಗ ನೀತಿಯನ್ನೂ ಹುಟ್ಟು ಹಾಕಿದ್ದು, ನಾವದನ್ನು ಸರಿಪಡಿಸಲು ಬಯಸುತ್ತಿದ್ದೇವೆ. ನೆಹರೂ ಮಾದರಿಯಿಂದ ದೇಶದಲ್ಲಿ ಉದ್ಭವಿಸಿರುವ ಪರಿಣಾಮಗಳನ್ನು ಸುಧಾರಿಸುವ ಪ್ರಯತ್ನ ನಡೆಸುತ್ತಿದ್ದೇವೆ ಎಂದು ಶನಿವಾರ ವಿದೇಶಾಂಗ ವ್ಯವಹಾರಗಳ ಸಚಿವ ಎಸ್‌.ಜೈಶಂಕರ್ ಹೇಳಿದರು.

ಶನಿವಾರ ಆಯೋಜನೆಗೊಂಡಿದ್ದ ನೀತಿ ಆಯೋಗದ ಮಾಜಿ ಉಪಾಧ್ಯಕ್ಷ ಅರವಿಂದ್ ಪನಗರಿಯ ರಚಿಸಿರುವ 'The Nehru Model' ಕೃತಿಯ ಬಿಡುಗಡೆ ಸಮಾರಂಭದಲ್ಲಿ ವರ್ಚುಯಲ್ ಆಗಿ ಭಾಗವಹಿಸಿ ಮಾತನಾಡಿದ ಜೈಶಂಕರ್, ಮಾಜಿ ಪ್ರಧಾನಿ ಜವಾಹರಲಾಲ್ ನೆಹರೂ ಅವರ ಆಯ್ಕೆಗಳು ಭಾರತವನ್ನು ನಿರ್ದಿಷ್ಟ ಪಥದಲ್ಲಿ ನಡೆಯುವಂತೆ ಮಾಡಿದವು ಎಂದು ಲೇಖಕರು ಅಭಿಪ್ರಾಯಪಟ್ಟಿದ್ದಾರೆ ಎಂಬುದರತ್ತಲೂ ಬೊಟ್ಟು ಮಾಡಿದರು.

ನೆಹರೂ ಮಾದರಿ ಹಾಗೂ ಅದರ ಸುತ್ತಲಿನ ನಿರೂಪಣೆಯು ಬೋಧಿಸುತ್ತಿರುವ ನಮ್ಮೆಲ್ಲರನ್ನೂ ಸೇರಿದಂತೆ ರಾಜಕೀಯ, ಅಧಿಕಾರಶಾಹಿ, ಯೊಜನಾ ವ್ಯವಸ್ಥೆ, ನ್ಯಾಯಾಂಗ ಹಾಗೂ ಮಾಧ್ಯಮಗಳು ಸೇರಿದಂತೆ ಸಾರ್ವಜನಿಕ ಸ್ಥಳಗಳನ್ನು ನಿಶ್ಚಿತವಾಗಿ ವ್ಯಾಪಿಸಿದೆ ಎಂದು ಅವರು ಪ್ರತಿಪಾದಿಸಿದರು.

2014ರ ನಂತರ ನಿಶ್ಚಿತವಾಗಿ ನೆಹರೂ ಮಾದರಿಯನ್ನು ಸರಿಪಡಿಸುವ ತೀವ್ರ ಪ್ರಯತ್ನ ನಡೆಸಲಾಗುತ್ತಿದೆ. ಆದರೆ, ಒಳ್ಳೆಯ ಕಾರಣಗಳಿಗಾಗಿಯೇ ಅದಿನ್ನೂ ಕಠಿಣ ಪ್ರಯಾಸವಾಗಿ ಉಳಿದಿದೆ ಎಂದು ಲೇಖಕರು ಅಭಿಪ್ರಾಯಪಟ್ಟಿದ್ದಾರೆ ಎಂದೂ ಅವರು ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - Musaveer

contributor

Byline - ವಾರ್ತಾಭಾರತಿ

contributor

Similar News