ನೇಪಾಳ: ಪಶುಪತಿನಾಥ ದೇವಳದಲ್ಲಿ 10 ಕೆ.ಜಿ. ಚಿನ್ನ ಕಳವು,ಭಕ್ತರಿಗೆ ಪ್ರವೇಶ ಬಂದ್

Update: 2023-06-25 17:42 GMT

ಕಠ್ಮಂಡು: ಇಲ್ಲಿಯ ಪ್ರಸಿದ್ಧ ಪಶುಪತಿನಾಥ ದೇವಳದಲ್ಲಿಯ 100 ಕೆ.ಜಿ.ತೂಕದ ಚಿನ್ನಾಭರಣದಿಂದ 10 ಕೆ.ಜಿ.ಚಿನ್ನ ನಾಪತ್ತೆಯಾಗಿದೆ. ಈ ಬಗ್ಗೆ ತನಿಖೆ ನಡೆಸಲು ನೇಪಾಳದ ಅತ್ಯುನ್ನತ ಭ್ರಷ್ಟಾಷಾರ ನಿಗ್ರಹ ಸಂಸ್ಥೆಯಾಗಿರುವ ಅಧಿಕಾರ ದುರ್ಬಳಕೆ ತನಿಖಾ ಆಯೋಗ (ಸಿಐಎಎ)ವು ದೇವಸ್ಥಾನವನ್ನು ತನ್ನ ವಶಕ್ಕೆ ತೆಗೆದುಕೊಂಡಿದ್ದು, ರವಿವಾರ ಅಪರಾಹ್ನ 3:30ರಿಂದ ಭಕ್ತರ ಪ್ರವೇಶವನ್ನು ನಿಷೇಧಿಸಲಾಗಿದೆ.

ಪಶುಪತಿನಾಥ ದೇವಳವು ಕಠ್ಮಂಡುವಿನ ಅತ್ಯಂತ ಹಳೆಯ ದೇವಸ್ಥಾನವಾಗಿದೆ.

ಕಳೆದ ವರ್ಷ ಮಹಾ ಶಿವರಾತ್ರಿ ಉತ್ಸವದ ಸಂದರ್ಭದಲ್ಲಿ ದೇವಳದಲ್ಲಿಯ ಶಿವಲಿಂಗದ ಸುತ್ತ 100 ಕೆ.ಜಿ.ತೂಕದ ಹೊಸ ಚಿನ್ನಾಭರಣ ‘ಜಲಹರಿ’ಯನ್ನು ಸ್ಥಾಪಿಸಲಾಗಿತ್ತು.

ಜಲಹರಿಯ ನಿರ್ಮಾಣಕ್ಕಾಗಿ ತಾನು 103 ಕೆ.ಜಿ.ಚಿನ್ನವನ್ನು ಖರೀದಿಸಿದ್ದೆ,ಆದರೆ ಆಭರಣದಿಂದ 10 ಕೆ.ಜಿ.ಚಿನ್ನ ನಾಪತ್ತೆಯಾಗಿದೆ ಎಂದು ಪಶುಪತಿ ಪ್ರದೇಶಾಭಿವೃದ್ಧಿ ಪ್ರಾಧಿಕಾರವು ಹೇಳಿದೆ.

ತನಿಖೆಯು ಪ್ರಗತಿಯಲ್ಲಿದ್ದು,ದೇವಸ್ಥಾನದ ಆವರಣದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ನೇಪಾಳ ಸೇನೆಯ ಯೋಧರು ಸೇರಿದಂತೆ ಭದ್ರತಾ ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ.

ದೇವಸ್ಥಾನವು ಮಧ್ಯರಾತ್ರಿಯವರೆಗೂ ಮುಚ್ಚಿರಲಿದೆ ಎಂದು ಬಲ್ಲ ಮೂಲಗಳು ತಿಳಿಸಿವೆ.

Tags:    

Writer - ವಾರ್ತಾಭಾರತಿ

contributor

Editor - Althaf

contributor

Byline - ವಾರ್ತಾಭಾರತಿ

contributor

Similar News