ಹರ್ಯಾಣ: ವಿಶ್ವಾಸಮತ ಗೆದ್ದ ನಯಾಬ್‌ ಸಿಂಗ್‌ ಸೈನಿ ಸರ್ಕಾರ

Update: 2024-03-13 09:18 GMT

Photo: NDTV

ಹೊಸದಿಲ್ಲಿ: ಮಂಗಳವಾರ ಹರ್ಯಾಣಾದ ನೂತನ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ನಯಾಬ್‌ ಸಿಂಗ್‌ ಸೈನಿ ಸರ್ಕಾರ ಇಂದು ವಿಧಾನಸಭೆಯಲ್ಲಿ ವಿಶ್ವಾಸಮತ ಪರೀಕ್ಷೆಯಲ್ಲಿ ಗೆದ್ದಿದೆ. ದುಶ್ಯಂತ್‌ ಚೌಟಾಲ ಅವರ ಜೆಜೆಪಿ ಜೊತೆ ಸಂಬಂಧಗಳನ್ನು ಕಡಿದ ನಂತರವೂ ಬಿಜೆಪಿಗೆ ತನ್ನ ಬಹುಮತ ಸಾಬೀತು ಪಡಿಸಲು ಸಾಧ್ಯವಾಗಿದೆ.

ಮಂಗಳವಾರ ಕ್ಷಿಪ್ರ ಬೆಳವಣಿಗೆಯಲ್ಲಿ ಮುಖ್ಯಮಂತ್ರಿ ಮನೋಹರ್‌ ಲಾಲ್‌ ಖಟ್ಟರ್‌ ಮತ್ತವರ ಸಚಿವ ಸಂಪುಟ ರಾಜೀನಾಮೆ ನೀಡಿತ್ತು. ಇದರ ಬೆನ್ನಲ್ಲೇ ನಯಾಬ್‌ ಸೈನಿ ಸಿಎಂ ಆಗಿ ಪ್ರಮಾಣವಚನ ಸ್ವೀಕರಿಸಿದ್ದರು. ರಾಜ್ಯದಲ್ಲಿ ಲೋಕಸಭಾ ಚುನಾವಣೆಗೆ ಬಿಜೆಪಿ-ಜೆಜೆಪಿ ನಡುವೆ ಸೀಟು ಹೊಂದಾಣಿಕೆ ಮಾತುಕತೆ ಮುರಿದು ಬಿದ್ದ ನಂತರದ ಬೆಳವಣಿಗೆ ಇದಾಗಿತ್ತು.

2019 ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅತ್ಯಂತ ದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದರೂ ಬಹುಮತಕ್ಕೆ ಆರು ಸ್ಥಾನಗಳ ಕೊರತೆ ಎದುರಾಗಿದ್ದರಿಂದ ಅದು ಜೆಜೆಪಿ ಜೊತೆ ಮೈತ್ರಿ ಸಾಧಿಸಿತ್ತು.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News