ವಯಸ್ಸಾದವರಲ್ಲಿನ ಕರುಳು, ಹೃದಯ ಹಾಗೂ ಮೂತ್ರಪಿಂಡದ ಮೇಲಿನ ಅಡ್ಡ ಪರಿಣಾಮಕ್ಕೆ ಪ್ಯಾರಾಸಿಟಮಲ್ ಬಳಕೆ ಕಾರಣ : ಅಧ್ಯಯನ ವರದಿ

Update: 2024-12-14 17:47 GMT

ಸಾಂದರ್ಭಿಕ ಚಿತ್ರ | PC : Meta AI

ಹೊಸದಿಲ್ಲಿ: ಸಾಮಾನ್ಯ ಚಿಕಿತ್ಸೆಗಾಗಿ ಬಳಕೆಯಾಗುವ ಪ್ಯಾರಾಸಿಟಮಲ್ 65 ವರ್ಷ ಮೇಲ್ಪಟ್ಟವರಲ್ಲಿ ಕರುಳು, ಹೃದಯ ಹಾಗೂ ಮೂತ್ರಪಿಂಡ ಸಂಬಂಧಿತ ಅಡ್ಡ ಪರಿಣಾಮಗಳಿಗೆ ಕಾರಣವಾಗಬಹುದು ಎಂದು ನೂತನ ಅಧ್ಯಯನ ವರದಿಯಲ್ಲಿ ಹೇಳಲಾಗಿದೆ.

ಅಲ್ಪ ಪ್ರಮಾಣದಿಂದ ಸಾಧಾರಣ ಪ್ರಮಾಣದ ಜ್ವರಕ್ಕೆ ಚಿಕಿತ್ಸೆ ನೀಡಲು ಬಳಸಲಾಗುವ ಪ್ಯಾರಾಸಿಟಮಲ್ ಅನ್ನು ಕೀಲುಗಳ ನಡುವೆ ಗಂಭೀರ ನೋವು, ಊತವನ್ನುಂಟು ಮಾಡುವ ಸಂಧಿವಾತಕ್ಕೂ ಸಾಮಾನ್ಯವಾಗಿ ಬಳಸಲಾಗುತ್ತದೆ.

ಆದರೆ, ಕೆಲ ವರದಿಗಳು ನೋವನ್ನು ಉಪಶಮನ ಮಾಡಲು ಪ್ಯಾರಾಸಿಟಮಲ್ ಬಳಕೆ ಎಷ್ಟು ಪರಿಣಾಮಕಾರಿ ಎಂದು ಸಾಕ್ಷ್ಯ ಒದಗಿಸಿದ್ದರೆ, ಮತ್ತೆ ಕೆಲವು ಅಧ್ಯಯನ ವರದಿಗಳು ಕರುಳಿನ ಮೇಲೆ ಆಗುವ ಅಡ್ಡ ಪರಿಣಾಮಗಳ ಮೇಲೆ ಬೆಳಕು ಚೆಲ್ಲಿವೆ. ಪ್ಯಾರಾಸಿಟಮಲ್‌ನ ದೀರ್ಘಾವಧಿ ಬಳಕೆಯಿಂದ ಹುಣ್ಣುಗಳು, ರಕ್ತಸ್ರಾವ ಆಗುವ ಸಾಧ್ಯತೆ ಇದೆ ಎಂದು ಇಂತಹ ವರದಿಗಳು ಎಚ್ಚರಿಸಿವೆ.

ಬ್ರಿಟನ್‌ನ ನಾಟಿಂಗ್ ಹ್ಯಾಮ್ ವಿಶ್ವವಿದ್ಯಾಲಯ ನಡೆಸಿರುವ ನೂತನ ಅಧ್ಯಯನದ ಪ್ರಕಾರ, ಕ್ರಮವಾಗಿ ಕರುಳಿನ ಮೇಲೆ ಆಗುವ ಹುಣ್ಣಿನಿಂದ ರಕ್ತಸ್ರಾವವಾಗುವ ಸಾಧ್ಯತೆ ಹಾಗೂ ಕೆಳ ಜಠರದಲ್ಲಿ ರಕ್ತಸ್ರಾವವಾಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.

ಪ್ಯಾರಾಸಿಟಮಲ್ ಔಷಧವನ್ನು ಸೇವಿಸುವುದರಿಂದ ಮೂತ್ರಪಿಂಡದ ಗಂಭೀರ ಸಮಸ್ಯೆ ಶೇ. 19ರಷ್ಟು, ಹೃದಯಾಘಾತ ಶೇ. 9ರಷ್ಟು ಹಾಗೂ ಅತಿಯಾದ ರಕ್ತದೊತ್ತಡ ಶೇ. 7ರಷ್ಟು ಹೆಚ್ಚಳವಾಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Musaveer

contributor

Byline - ವಾರ್ತಾಭಾರತಿ

contributor

Similar News