ಇನ್ನು 10, 12ನೇ ಬೋರ್ಡ್ ಪರೀಕ್ಷೆಗಳಿಗೆ ‘ಡಿವಿಶನ್ʼ, ‘ಡಿಸ್ಟಿಂಕ್ಶನ್’ ನೀಡುವುದಿಲ್ಲ ; ಸಿಬಿಎಸ್ಇ ಪ್ರಕಟನೆ

Update: 2023-12-01 16:34 GMT

ಸಾಂದರ್ಭಿಕ ಚಿತ್ರ | Photo: PTI 

ಹೊಸದಿಲ್ಲಿ: ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿ (ಸಿಬಿಎಸ್ಇ)ಯು ಇನ್ನು ಮುಂದೆ 10 ಮತ್ತು 12ನೇ ತರಗತಿಗಳ ಬೋರ್ಡ್ ಪರೀಕ್ಷೆಗಳಿಗೆ ಯಾವುದೇ ‘ಡಿವಿಶನ್’ ಮತ್ತು ‘ಡಿಸ್ಟಿಂಕ್ಶನ್’ ನೀಡುವುದಿಲ್ಲ.

ಸಿಬಿಎಸ್ಇ ಪರೀಕ್ಷಾ ನಿಯಂತ್ರಕ ಸನ್ಯಾಮ್ ಭಾರದ್ವಾಜ್ ಅಧಿಕೃತ ಪ್ರಕಟನೆಯೊಂದರಲ್ಲಿ ಈ ನಿರ್ಧಾರವನ್ನು ತಿಳಿಸಿದ್ದಾರೆ.

ವಿದ್ಯಾರ್ಥಿಗಳ ಅಂಕಗಳನ್ನು ಲೆಕ್ಕ ಮಾಡುವುದಕ್ಕಾಗಿ ಅತ್ಯುತ್ತಮ ವಿಷಯಗಳನ್ನು ಆಯ್ಕೆ ಮಾಡುವ ಅಧಿಕಾರ ಅವರಿಗೆ ಪ್ರವೇಶ ನೀಡುವ ಕಾಲೇಜುಗಳಿಗೆ ಮಾತ್ರ ಇರುತ್ತದೆ ಎಂಬುದಾಗಿಯೂ ಪ್ರಕಟನೆ ತಿಳಿಸಿದೆ.

‘‘ಅಭ್ಯರ್ಥಿಯು ಐದಕ್ಕಿಂತ ಹೆಚ್ಚು ವಿಷಯಗಳನ್ನು ಒದಗಿಸಿದ್ದರೆ, ಅತ್ಯುತ್ತಮ ಐದು ವಿಷಯಗಳನ್ನು ನಿರ್ಧರಿಸುವ ಅಧಿಕಾರ ಪ್ರವೇಶ ನೀಡುವ ಸಂಸ್ಥೆ ಅಥವಾ ಉದ್ಯೋಗದಾತರಿಗೆ ಇರುತ್ತದೆ. ಅದೂ ಅಲ್ಲದೆ, ಮಂಡಳಿಯು ಶೇಕಡಾವಾರು ಅಂಕಗಳನ್ನು ಲೆಕ್ಕಮಾಡುವುದಿಲ್ಲ, ಘೋಷಿಸುವುದಿಲ್ಲ ಅಥವಾ ತಿಳಿಸುವುದಿಲ್ಲ. ಉನ್ನತ ಶಿಕ್ಷಣ ಅಥವಾ ಉದ್ಯೋಗಕ್ಕಾಗಿ ಶೇಕಡಾವಾರು ಅಂಕಗಳು ಬೇಕಾಗಿದ್ದರೆ, ಆ ಲೆಕ್ಕಾಚಾರವನ್ನು ಪ್ರವೇಶ ನೀಡುವ ಸಂಸ್ಥೆ ಅಥವಾ ಉದ್ಯೋಗದಾತರು ಮಾಡಬಹುದಾಗಿದೆ’’ ಎಂದು ಪ್ರಕಟನೆ ತಿಳಿಸಿದೆ.

ಬೋರ್ಡ್ ಪರೀಕ್ಷೆಗಳಲ್ಲಿ ವಿದ್ಯಾರ್ಥಿಗಳ ಶೇಕಡಾವಾರು ಅಂಕಗಳನ್ನು ಲೆಕ್ಕ ಹಾಕುವ ಮಾನದಂಡವನ್ನು ಹಲವಾರು ಮಂದಿ ಪ್ರಶ್ನಿಸಿರುವ ಹಿನ್ನೆಲೆಯಲ್ಲಿ, ಮಂಡಳಿಯು ಈ ಪ್ರಕಟನೆಯನ್ನು ಹೊರಡಿಸಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News