ಒಡಿಶಾ: ದಲಿತ ಯುವತಿಯ ಅತ್ಯಾಚಾರ

Update: 2023-12-04 15:23 GMT

ಕೇಂದ್ರಪಾರ: ಇಪ್ಪತ್ತೆರೆಡು ವರ್ಷಗಳ ದಲಿತ ಯುವತಿಯ ಅತ್ಯಾಚಾರ ಹಾಗೂ ಆಕೆಯ ಖಾಸಗಿ ಫೋಟೊ ಬಳಸಿ ಬ್ಲಾಕ್ಮೇಲ್ ಮಾಡಿದ ಆರೋಪದಲ್ಲಿ ಬ್ಯೂಟಿ ಪಾರ್ಲರ್ನ ಮಾಲಕರೋರ್ವರನ್ನು ಪಟ್ಟಮುಂಡೈ ಪೊಲೀಸ್ ಠಾಣೆಯ ಪೊಲೀಸರು ರವಿವಾರ ಬಂಧಿಸಿದ್ದಾರೆ.

ಆರೋಪಿಯನ್ನು ನೀಲಿಕಂಠ ಗ್ರಾಮದ 35 ವರ್ಷದ ಪ್ರತಾಪ್ ಸಾಹು ಎಂದು ಗುರುತಿಸಲಾಗಿದೆ.

‘‘ಆರೋಪಿ ಸಾಹು ಕೆಲವು ತಿಂಗಳ ಹಿಂದೆ ಸಂತ್ರಸ್ತೆಯೊಂದಿಗೆ ಸ್ನೇಹ ಬೆಳೆಸಿ ಚೌಡಕುಲತ್ನಲ್ಲಿರುವ ತನ್ನ ಬ್ಯೂಟಿ ಪಾರ್ಲರ್ನಲ್ಲಿ ಕೆಲಸ ಕೊಡಿಸಿದ್ದ. ಕಳೆದ ತಿಂಗಳು ಸಾಹು ಬ್ಯೂಟಿ ಪಾರ್ಲರ್ನಲ್ಲಿ ಮೃದು ಪಾನೀಯದಲ್ಲಿ ಮತ್ತು ಬರಿಸುವ ಔಷದ ಬೆರೆಸಿ ಆಕೆಗೆ ನೀಡಿದ್ದ. ಆಕೆ ಪ್ರಜ್ಞೆ ಕಳೆದುಕೊಂಡ ಬಳಿಕ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದ ಹಾಗೂ ಆಕೆಯ ನಗ್ನ ಚಿತ್ರ, ವೀಡಿಯೊಗಳನ್ನು ತನ್ನ ಫೋನ್ನಲ್ಲಿ ಚಿತ್ರಿಸಿಕೊಂಡಿದ್ದ’’ ಎಂದು ಪಟ್ಟಮುಂಡಿಮುಂಡೈ ಪೊಲೀಸ್ ಠಾಣೆಯ ಉಸ್ತುವಾರಿ ಅಧಿಕಾರಿ ರಂಜಿತ್ ಮೊಹಾಂತಿ ಹೇಳಿದ್ದಾರೆ.

ಪ್ರಜ್ಞೆ ಬಂದಾಗ ಆರೋಪಿ ಆಕೆಗೆ ಖಾಸಗಿ ಫೋಟೊಗಳನ್ನು ತೋರಿಸಿ ಬೆದರಿಕೆ ಒಡ್ಡ್ದಿದ್ದ. ನಂತರ ಆಕೆಯನ್ನು ಬ್ಲ್ಯಾಕ್ಮೇಲ್ ಮಾಡಿ ತಿಂಗಳು ಕಾಲ ನಿರಂತರ ಅತ್ಯಾಚಾರ ಎಸಗಿದ್ದ. ಈ ವಿಷಯವನ್ನು ಬಹಿರಂಗಪಡಿಸಿದರೆ, ಹತ್ಯೆಗೈಯಲಾಗುವುದು ಎಂದು ಕೂಡ ಆತ ಬೆದರಿಕೆ ಒಡ್ಡಿದ್ದ ಎಂದು ಅವರು ತಿಳಿಸಿದ್ದಾರೆ.

ಕಳೆದ ವಾರ ಯುವತಿ ಶಾಹುವಿನ ಬ್ಯೂಟಿ ರ್ಪಾಲರ್ನ ಕೆಲಸ ಬಿಟ್ಟಿದ್ದಳು ಹಾಗೂ ಕೇಂದ್ರಪಾರ ಪಟ್ಟಣದಲ್ಲಿರುವ ಇನ್ನೊಂದು ಬ್ಯೂಟಿ ಪಾರ್ಲರ್ಗೆ ಕೆಲಸಕ್ಕೆ ಸೇರಿದ್ದಳು. ಇದರಿಂದ ಕೆರಳಿದ ಸಾಹು ಶನಿವಾರ ಆಕೆಯನ್ನು ನಿಂದಿಸಿದ್ದಾನೆ ಹಾಗೂ ಆಕೆಯ ಖಾಸಗಿ ಫೋಟೊಗಳನ್ನು ಸಾಮಾಜಿಕ ಜಾಲ ತಾಣದಲ್ಲಿ ವೈರಲ್ ಮಾಡುವುದಾಗಿ ಬೆದರಿಕೆ ಒಡ್ಡಿದ್ದಾನೆ.

ಅದೇ ದಿನ ಯುವತಿ ಪಟ್ಟಮುಂಡೈ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಇದನ್ನು ಆಧರಿಸಿ ಪ್ರಕರಣ ದಾಖಲಿಸಲಾಗಿದೆ ಹಾಗೂ ಆರೋಪಿಯನ್ನು ಬಂಧಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News