ಬಿಜೆಡಿ ಅಧ್ಯಕ್ಷ ಹುದ್ದೆಗೆ ಒಂಭತ್ತನೇ ಸಲ ನಾಮಪತ್ರ ಸಲ್ಲಿಸಿದ ಪಟ್ನಾಯಕ್
Update: 2025-04-17 21:40 IST
Photo Credit: PTI
ಭುವನೇಶ್ವರ: ಒಡಿಶಾ ವಿಧಾನಸಭೆಯಲ್ಲಿ ಪ್ರತಿಪಕ್ಷ ನಾಯಕ ನವೀನ್ ಪಟ್ನಾಯಕ್ ಅವರು ಗುರುವಾರ ಬಿಜು ಜನತಾ ದಳ(ಬಿಜೆಡಿ)ದ ಅಧ್ಯಕ್ಷ ಹುದ್ದೆಗೆ ಒಂಭತ್ತನೇ ಸಲ ನಾಮಪತ್ರ ಸಲ್ಲಿಸಿದ್ದಾರೆ.
ಮಾಜಿ ಮುಖ್ಯಮಂತ್ರಿ ಪಟ್ನಾಯಕ್ ಅಧ್ಯಕ್ಷ ಹುದ್ದೆಗೆ ಏಕೈಕ ಅಭ್ಯರ್ಥಿಯಾಗಿದ್ದಾರೆ. 1997ರಲ್ಲಿ ಬಿಜೆಡಿ ಸ್ಥಾಪನೆಗೊಂಡಾಗಿನಿಂದ ಪಟ್ನಾಯಕ್ ಸತತ ಎಂಟು ಸಲ ಪಕ್ಷದ ಅಧ್ಯಕ್ಷರಾಗಿ ಆಯ್ಕೆಗೊಂಡಿದ್ದಾರೆ. ಈ ಹಿಂದೆ ಫೆಬ್ರವರಿ 2020ರಲ್ಲಿ ಹುದ್ದೆಗೆ ಆಯ್ಕೆಯಾಗಿದ್ದರು.
ತನ್ನ ತಂದೆ ಬಿಜು ಪಟ್ನಾಯಕ್ ಅವರ 28ನೇ ಪುಣ್ಯತಿಥಿಯಂದೇ ಪಟ್ನಾಯಕ್ ತನ್ನ ನಾಮಪತ್ರ ಸಲ್ಲಿಸಿದ್ದಾರೆ. ಎ.19ರಂದು ಪಟ್ನಾಯಕ್ ಅವರ ಅವಿರೋಧ ಆಯ್ಕೆಯನ್ನು ಪ್ರಕಟಿಸಲಾಗುವುದು ಎಂದು ಪಕ್ಷದ ಮೂಲಗಳು ತಿಳಿಸಿವೆ.