ಒಡಿಶಾ ರೈಲು ದುರಂತ; ಮೂವರು ರೈಲ್ವೆ ಅಧಿಕಾರಿಗಳ ವಿರುದ್ಧ ಸಿಬಿಐ ಚಾರ್ಜ್ ಶೀಟ್

Update: 2023-09-02 16:56 GMT

PHOTO: PTI 

ಹೊಸದಿಲ್ಲಿ: ಒಡಿಶಾದ ಬಾಲಸೋರ್ನಲ್ಲಿ ಜೂನ್ 2ರಂದು ಸಂಭವಿಸಿದ ತ್ರಿವಳಿ ರೈಲು ದುರಂತಕ್ಕೆ ಸಂಬಂಧಿಸಿ ರೈಲ್ವೆ ಇಲಾಖೆಯ ಮೂವರು ಅಧಿಕಾರಿಗಳ ವಿರುದ್ಧ ಕೇಂದ್ರೀಯ ತನಿಖಾ ಸಂಸ್ಥೆ (ಸಿಬಿಐ) ಶನಿವಾರ ದೋಷಾರೋಪ ಪಟ್ಟಿಯನ್ನು ದಾಖಲಿಸಿದೆ.

ಬಾಲಸೋರ್ನಲ್ಲಿ ಹಿರಿಯ ವಿಭಾಗೀಯ ಇಂಜಿನಿಯರ್ (ಸಿಗ್ನಲ್) ಆಗಿ ಕಾರ್ಯನಿರ್ವಹಿಸುತ್ತಿದ್ದ ಅರುಣ್ ಕುಮಾರ್ ಮೊಹಂತ, ಆಗ ಸೊರೊದಲ್ಲಿ ವಿಭಾಗೀಯ ಇಂಜಿನಿಯರ್ ಆಗಿದ್ದ ಮೊಹಮ್ಮದ್ ಆಮೀರ್ ಖಾನ್ ಹಾಗೂ ಬಾಲಸೋರ್ನಲ್ಲಿ ಟೆಕ್ನಿಶಿಯನ್ ಆಗಿ ನಿಯೋಜಿತರಾಗಿದ್ದ ಪಪ್ಪು ಕುಮಾರ್ ವಿರುದ್ಧ ದೋಷಾರೋಪ ಪಟ್ಟಿಯನ್ನು ದಾಖಲಿಸಿದೆ.

ಈ ಮೂವರು ಅಧಿಕಾರಿಗಳ ವಿರುದ್ಧ ರೈಲ್ವೆ ಕಾಯ್ದೆಯ ಸೆಕ್ಷನ್ಗಳಾದ 304 (ಭಾಗII), (ಸಾವಿಗೆ ಕಾರಣವಾಗುವ ಸಾಧ್ಯತೆಯಿದೆಯೆಂಬ ತಿಳುವಳಿಕೆಯೊಂದಿಗೆ ಎಸಗಿದ ಕೃತ್ಯ. ಆದರೆ ಸಾವುಸಂಭವಿಸುವಂತೆ ಮಾಡುವ ಅಥವಾ ಯಾವುದೇ ದೈಹಿಕ ಹಾನಿ ಮಾಡುವಂತಹ ಯಾವುದೇ ಉದ್ದೇಶವಿಲ್ಲದೆ ಇರುವುದು), ಸೆಕ್ಷನ್ 34 ( ಸಮಾನ ಉದ್ದೇಶ), 201 (ಪುರಾವೆಗಳ ಕಣ್ಮರೆಗೊಳಿಸುವಿಕೆ) ಹಾಗೂ 153 ( ಉದ್ದೇಶಪೂರ್ವಕ ಕೃತ್ಯ ಅಥವಾ ಲೋಪದಿಂದಾಗಿ ಪ್ರಯಾಣಿಕರ ಸುರಕ್ಷತೆಯನ್ನು ಅಪಾಯಕ್ಕೊಡ್ಡುವುದು) ಅನ್ವಯ ಪ್ರಕರಣ ದಾಖಲಿಸಲಾಗಿದೆ.

ತ್ರಿವಳಿ ರೈಲು ದುರಂತದ ಆನಂತರ ತಮ್ಮ ಕರ್ತವ್ಯಲೋಪ ಪತ್ತೆಯಾಗುವುದನ್ನು ತಪ್ಪಿಸಲು ಈ ಮೂವರು ಅಧಿಕಾರಿಗಳು ಪುರಾವೆಗಳನ್ನು ನಾಶಪಡಿಸಿದ್ದಾರೆಂದು ಸಿಬಿಐ ಆಪಾದಿಸಿದೆ.

ಎೂನ್ 2ರಂದು ಒಡಿಶಾದ ಬಾಲಸೋರ್ನಲ್ಲಿ ಎರಡು ಪ್ರಯಾಣಿಕ ರೈಲುಗಳು ಹಾಗೂ ಒಂದು ಗೂಡ್ಸ್ ರೈಲು ನಡುವೆ ಸಂಭವಿಸಿದ ಭೀಕರ ಅವಘಡದಲ್ಲಿ 291 ಮಂದಿ ಮೃತಪಟ್ಟಿದ್ದು, 1200ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದರು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News