ರಾಜ್ಯಸಭೆಯಲ್ಲಿ ಅದಾನಿ ಪ್ರಕರಣದ ಬಗ್ಗೆ ಚರ್ಚೆ ಮಾಡುವಂತೆ “ವ್ಯವಹಾರ ಅಮಾನತು” ನೋಟಿಸ್ ನೀಡಿದ ಪ್ರತಿಪಕ್ಷಗಳು
Update: 2024-11-28 06:29 GMT
ಹೊಸದಿಲ್ಲಿ: ರಾಜ್ಯಸಭೆಯಲ್ಲಿ ಅದಾನಿ ಲಂಚ ಪ್ರಕರಣದ ಕುರಿತು ಚರ್ಚೆಗೆ ಆಗ್ರಹಿಸಿ ವಿರೋಧ ಪಕ್ಷದ ನಾಯಕರು ನಿಯಮ 267ರ ಅಡಿಯಲ್ಲಿ ವ್ಯವಹಾರ ಅಮಾನತು ನೋಟಿಸ್ ಸಲ್ಲಿಸಿದ್ದಾರೆ.
ಎಎಪಿ ಸಂಸದ ಸಂಜಯ್ ಸಿಂಗ್ ಮತ್ತು ಕಾಂಗ್ರೆಸ್ ಸಂಸದ ಡಾ ಸೈಯದ್ ನಸೀರ್ ಹುಸೇನ್ ಅವರು ಅದಾನಿ ಲಂಚ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯಸಭೆಯಲ್ಲಿ ನಿಯಮ 267ರ ಅಡಿಯಲ್ಲಿ ನೋಟಿಸ್ ಸಲ್ಲಿಸಿದ್ದು, ನಿಗದಿತ ಸಂಸದೀಯ ವ್ಯವಹಾರಗಳನ್ನು ಅಮಾನತುಗೊಳಿಸಿ ಅದಾನಿ ಲಂಚ ಪ್ರಕರಣದ ಕುರಿತು ಚರ್ಚೆಗೆ ಒತ್ತಾಯಿಸಿದ್ದಾರೆ.
ನಿಯಮ 267ರ ಅಡಿಯಲ್ಲಿ ಪಟ್ಟಿ ಮಾಡಲಾದ ವ್ಯವಹಾರವನ್ನು ದಿನದ ಮಟ್ಟಿಗೆ ಅಮಾನತುಗೊಳಿಸಲು ಮತ್ತು ತುರ್ತು ವಿಷಯಗಳ ಬಗ್ಗೆ ಚರ್ಚಿಸಲು ಸಂಸದರು ಲಿಖಿತ ಸೂಚನೆಯನ್ನು ಸಲ್ಲಿಸಬಹುದಾಗಿದೆ.