ರಾಜ್ಯಸಭಾ ಸ್ಪೀಕರ್ ಜಗದೀಪ್ ಧನ್ಕರ್ ವಿರುದ್ಧ ಪ್ರತಿಪಕ್ಷಗಳಿಂದ ಅವಿಶ್ವಾಸ ನಿರ್ಣಯ ಮಂಡನೆ
Update: 2024-12-10 07:57 GMT
ಹೊಸದಿಲ್ಲಿ: ರಾಜ್ಯಸಭೆ ಸ್ಪೀಕರ್ ಜಗದೀಪ್ ಧನ್ಕರ್ ವಿರುದ್ಧ ಪ್ರತಿಪಕ್ಷಗಳ INDIA ಮೈತ್ರಿಕೂಟದ ಸಂಸದರು ರಾಜ್ಯಸಭೆಯಲ್ಲಿ ಅವಿಶ್ವಾಸ ನಿರ್ಣಯವನ್ನು ಮಂಡಿಸಿದ್ದಾರೆ.
INDIA ಮೈತ್ರಿಕೂಟದ ಪಕ್ಷಗಳಾದ ಕಾಂಗ್ರೆಸ್, ತೃಣಮೂಲ, ಎಎಪಿ, ಎಸ್ಪಿ, ಡಿಎಂಕೆ ರಾಷ್ಟ್ರೀಯ ಜನತಾ ದಳದ 50ಕ್ಕೂ ಅಧಿಕ ಸಂಸದರು ಸಹಿ ಹಾಕಿರುವ ಅವಿಶ್ವಾಸ ನಿರ್ಣಯ ಪತ್ರವನ್ನು ರಾಜ್ಯಸಭೆಯ ಕಾರ್ಯದರ್ಶಿಗೆ ನೀಡಲಾಗಿದೆ.
ರಾಜ್ಯಸಭಾ ಸ್ಪೀಕರ್ ಸದನದಲ್ಲಿ ಕಲಾಪದ ವೇಳೆ ಪಕ್ಷಪಾತ ಮಾಡುತ್ತಾರೆ, ಅವರು ತಮ್ಮ ಭಾಷಣಗಳಿಗೆ ಆಗಾಗ್ಗೆ ಅಡ್ಡಿ ಪಡಿಸುತ್ತಿದ್ದಾರೆ, ನಿರ್ಣಾಯಕ ವಿಷಯಗಳ ಬಗ್ಗೆ ಸಾಕಷ್ಟು ಚರ್ಚೆಗೆ ಅವಕಾಶ ನೀಡುತ್ತಿಲ್ಲ ಮತ್ತು ವಿವಾದಾತ್ಮಕ ವಿಷಯಗಳ ಬಗ್ಗೆ ಚರ್ಚೆಗಳಲ್ಲಿ ಆಡಳಿತ ಪಕ್ಷದ ಪರವಾಗಿದ್ದಾರೆ ಎಂದು ವಿಪಕ್ಷಗಳ ಸಂಸದರು ಈ ಮೊದಲು ಆರೋಪಿಸಿದ್ದರು.