ಪಹಲ್ಗಾಮ್ ಭಯೋತ್ಪಾದಕ ದಾಳಿ | ತೀರ ಹತ್ತಿರದಿಂದ ಪ್ರವಾಸಿಗೆ ಗುಂಡು ಹಾರಿಸಿರುವ ಭೀಕರ ವೀಡಿಯೊ ಲಭ್ಯ

Update: 2025-04-26 20:34 IST
ಪಹಲ್ಗಾಮ್ ಭಯೋತ್ಪಾದಕ ದಾಳಿ | ತೀರ ಹತ್ತಿರದಿಂದ ಪ್ರವಾಸಿಗೆ ಗುಂಡು ಹಾರಿಸಿರುವ ಭೀಕರ ವೀಡಿಯೊ ಲಭ್ಯ
PC : Youtube Screenbrab
  • whatsapp icon

ಹೊಸದಿಲ್ಲಿ: ಪಹಲ್ಗಾಮ್ ಭಯೋತ್ಪಾದಕ ದಾಳಿಯ ಹೊಸ ವೀಡಿಯೊವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ. ಭಯೋತ್ಪಾದಕನೋರ್ವ ಪ್ರವಾಸಿಯ ಮೇಲೆ ಗುಂಡು ಹಾರಿಸಿರುವ ದೃಶ್ಯವನ್ನು ವೀಡಿಯೊ ತೋರಿಸಿದೆ. ಎ.22ರಂದು ಪಹಲ್ಗಾಮ್ ಸಮೀಪದ ಬೈಸರನ್‌ನಲ್ಲಿ ಪ್ರವಾಸಿಗಳ ಗುಂಪಿನ ಮೇಲೆ ನಡೆದಿದ್ದ ಗುಂಡಿನ ದಾಳಿಯಲ್ಲಿ 26 ಜನರು ಮೃತಪಟ್ಟು,ಇತರ 17 ಜನರು ಗಾಯಗೊಂಡಿದ್ದರು.

ವೀಡಿಯೊದಲ್ಲಿ ಬಿಳಿಯ ಬಟ್ಟೆಯನ್ನು ಧರಿಸಿದ್ದ ಪ್ರವಾಸಿಯ ಮುಂದೆ ಕಪ್ಪು ಉಡುಪು ಧರಿಸಿದ್ದ ಭಯೋತ್ಪಾದಕನೋರ್ವ ನಿಂತಿದ್ದು ಮತ್ತು ಏಕಾಏಕಿ ಭಯೋತ್ಪಾದಕ ಪಾಯಿಂಟ್ ಬ್ಲಾಂಕ್ ರೇಂಜ್‌ ನಲ್ಲಿ ಪ್ರವಾಸಿಯ ಮೇಲೆ ಗುಂಡುಗಳನ್ನು ಹಾರಿಸಿದ ದೃಶ್ಯ ದಾಖಲಾಗಿದೆ. ತಕ್ಷಣವೇ ಸ್ಥಳದಲ್ಲಿ ಕೋಲಾಹಲ ಸೃಷ್ಟಿಯಾಗಿದ್ದು, ಭಯಭೀತ ಪ್ರವಾಸಿಗಳು ಚೀರುತ್ತ ದಿಕ್ಕಾಪಾಲಾಗಿ ಓಡುತ್ತಿರುವುದನ್ನೂ ವೀಡಿಯೊ ತೋರಿಸಿದೆ.

Full View

ದಾಳಿಯ ಬಳಿಕ ಭಾರತೀಯ ಸೇನೆ,ಜಮ್ಮುಕಾಶ್ಮೀರ ಪೋಲಿಸ್ ಮತ್ತು ಸಿಆರ್‌ಪಿಎಫ್ ಸೇರಿದಂತೆ ಭದ್ರತಾ ಪಡೆಗಳು ಭಯೋತ್ಪಾದಕರಿಗಾಗಿ ಜಂಟಿ ಶೋಧ ಕಾರ್ಯಾಚರಣೆಗಳನ್ನು ತೀವ್ರಗೊಳಿಸಿವೆ. ಅರಣ್ಯಗಳಲ್ಲಿ ಹುಡುಕಾಟದ ಜೊತೆಗೆ ಭಯೋತ್ಪಾದಕರ ಅಡಗುದಾಣಗಳನ್ನು ಒಂದೊಂದಾಗಿ ನಾಶಗೊಳಿಸಲಾಗುತ್ತಿದೆ. ಈಗಾಗಲೇ ಹಲವಾರು ಭಯೋತ್ಪಾದಕರ ಮನೆಗಳನ್ನು ಧ್ವಂಸಗೊಳಿಸಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News