ಸಂಸತ್ತೇ ಸರ್ವೋಚ್ಚ: ಮತ್ತೆ ನ್ಯಾಯಾಂಗದ ವಿರುದ್ಧ ಅಸಮಾಧಾನ ಹೊರಹಾಕಿದ ಉಪರಾಷ್ಟ್ರಪತಿ ಜಗದೀಪ್ ಧನಕರ್

Update: 2025-04-22 15:57 IST
ಸಂಸತ್ತೇ ಸರ್ವೋಚ್ಚ: ಮತ್ತೆ ನ್ಯಾಯಾಂಗದ ವಿರುದ್ಧ ಅಸಮಾಧಾನ ಹೊರಹಾಕಿದ ಉಪರಾಷ್ಟ್ರಪತಿ ಜಗದೀಪ್ ಧನಕರ್

ಉಪರಾಷ್ಟ್ರಪತಿ ಜಗದೀಪ್ ಧನಕರ್ (Photo: PTI)

  • whatsapp icon

ಹೊಸದಿಲ್ಲಿ : ಸಂಸತ್ತೇ ಸರ್ವೋಚ್ಚವಾಗಿದೆ ಎಂದು ಉಪರಾಷ್ಟ್ರಪತಿ ಜಗದೀಪ್ ಧನಕರ್ ಹೇಳಿದ್ದು, ಮತ್ತೆ ನ್ಯಾಯಾಂಗದ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.

ದಿಲ್ಲಿ ವಿಶ್ವವಿದ್ಯಾನಿಲಯದಲ್ಲಿ ಮಾತನಾಡಿದ ಉಪರಾಷ್ಟ್ರಪತಿ ಜಗದೀಪ್ ಧನಕರ್, 1977ರಲ್ಲಿ ತುರ್ತು ಪರಿಸ್ಥಿತಿಯನ್ನು ಹೇರಿದ ಪ್ರಧಾನಿಯನ್ನು ಹೊಣೆಗಾರರನ್ನಾಗಿ ಮಾಡಲಾಯಿತು. ಆದ್ದರಿಂದ ಅದರಲ್ಲಿ ಯಾವುದೇ ಅನುಮಾನ ಬೇಡ, ಸಂವಿಧಾನವು ಜನರಿಗಾಗಿದೆ ಮತ್ತು ಚುನಾಯಿತ ಪ್ರತಿನಿಧಿಗಳು ಸಂವಿಧಾನ ಹೇಗಿರುತ್ತದೆ ಎಂಬುದರ ಅಂತಿಮ ನಿರ್ಧಾರ ತೆಗೆದುಕೊಳ್ಳುವವರಾಗಿರುತ್ತಾರೆ. ಸಂಸತ್ತು ಸರ್ವೋಚ್ಚವಾಗಿದೆ ಎಂದು ನ್ಯಾಯಾಂಗ ಮತ್ತು ಕಾರ್ಯಾಂಗದ ಕುರಿತು ನಡೆಯುತ್ತಿರುವ ಚರ್ಚೆಯ ಮಧ್ಯೆ ಅವರು ಹೇಳಿದರು.

ಸುಪ್ರೀಂ ಕೋರ್ಟ್‌ನ ಎರಡು ವಿರೋಧಾತ್ಮಕ ಹೇಳಿಕೆಗಳನ್ನು ಉಪರಾಷ್ಟ್ರಪತಿಗಳು ಉಲ್ಲೇಖಿಸಿದರು. ಒಂದು ಪ್ರಕರಣದಲ್ಲಿ, ಪೀಠಿಕೆಯು ಸಂವಿಧಾನದ ಭಾಗವಲ್ಲ (ಗೋರ್ಕಾನಾಥ್ ಪ್ರಕರಣ) ಎಂದು ಹೇಳುತ್ತದೆ. ಇನ್ನೊಂದು ಪ್ರಕರಣದಲ್ಲಿ ಅದು ಸಂವಿಧಾನದ ಭಾಗವಾಗಿದೆ (ಕೇಶವಾನಂದ ಭಾರತಿ) ಎಂದು ಹೇಳುತ್ತದೆ.

ನಮ್ಮ ಮೌನವು ಬಹಳ ಅಪಾಯಕಾರಿಯಾಗಿರಬಹುದು. ಚಿಂತನಶೀಲ ಮನಸ್ಸುಗಳು ನಮ್ಮ ಪರಂಪರೆಯನ್ನು ಸಂರಕ್ಷಿಸುವಲ್ಲಿ ಕೊಡುಗೆ ನೀಡಬೇಕು. ಸಂಸ್ಥೆಗಳನ್ನು ಹಾಳುಮಾಡಲು ಅಥವಾ ವ್ಯಕ್ತಿಗಳನ್ನು ಕಳಂಕಿಸಲು ನಾವು ಅನುಮತಿಸುವುದಿಲ್ಲ. ಸಾಂವಿಧಾನಿಕ ಪ್ರಾಧಿಕಾರದ ಪ್ರತಿಯೊಂದು ಮಾತು ಸಂವಿಧಾನದಿಂದ ಮಾರ್ಗದರ್ಶಿಸಲ್ಪಡುತ್ತದೆ ಎಂದು ಜಗದೀಪ್ ಧನಕರ್ ಹೇಳಿದರು.

ನಾವು ನಮ್ಮ ಭಾರತೀಯತೆಯ ಬಗ್ಗೆ ಹೆಮ್ಮೆ ಪಡಬೇಕು. ನಮ್ಮ ಪ್ರಜಾಪ್ರಭುತ್ವಕ್ಕೆ ಅಡ್ಡಿಪಡಿಸುವುದನ್ನು ಹೇಗೆ ಸಹಿಸಿಕೊಳ್ಳುವುದು? ಸಾರ್ವಜನಿಕ ಆಸ್ತಿಯನ್ನು ಸುಡಲಾಗುತ್ತಿದೆ. ಸಾರ್ವಜನಿಕ ಸುವ್ಯವಸ್ಥೆಗೆ ಧಕ್ಕೆಯಾಗಿದೆ. ನಾವು ಈ ಶಕ್ತಿಗಳನ್ನು ತಟಸ್ಥಗೊಳಿಸಬೇಕು. ಮೊದಲು ಆಪ್ತ ಸಮಾಲೋಚನೆ ನಡೆಸಿ ಉದ್ದೇಶ ಸಾಧಿಸಲು ಪ್ರಯತ್ನಿಸಬೇಕು ಎಂದು ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - Ashfaq

contributor

Byline - ವಾರ್ತಾಭಾರತಿ

contributor

Similar News