"ದಯವಿಟ್ಟು ಅವಳನ್ನು ರಕ್ಷಿಸಿ, ಸಮಯ ಮೀರುತ್ತಿದೆ": ಯೆಮನ್ ನಲ್ಲಿ ಮರಣದಂಡನೆ ಶಿಕ್ಷೆಗೆ ಗುರಿಯಾಗಿರುವ ಕೇರಳ ನರ್ಸ್ ನಿಮಿಷಾ ಪ್ರಿಯಾ ತಾಯಿ ಮನವಿ

Update: 2025-01-01 05:00 GMT

ನಿಮಿಷಾ ಪ್ರಿಯಾ (Photo:X)

ತಿರುವನಂತಪುರಂ/ಹೊಸದಿಲ್ಲಿ: ಯೆಮನ್ ಪ್ರಜೆಯನ್ನು ಹತ್ಯೆಗೈದ ಪ್ರಕರಣದಲ್ಲಿ ಯೆಮನ್ ನಲ್ಲಿ ಮರಣದಂಡನೆ ಶಿಕ್ಷೆಗೆ ಗುರಿಯಾಗಿರುವ ಕೇರಳದ ನರ್ಸ್ ನಿಮಿಷಾ ಪ್ರಿಯಾ ಅವರ ತಾಯಿ ತನ್ನ ಮಗಳ ಜೀವ ಉಳಿಸಲು ನೆರವು ನೀಡುವಂತೆ ಭಾವನಾತ್ಮಕ ಮನವಿ ಮಾಡಿದ್ದಾರೆ.

ನಿಮಿಷಾ ಅವರ ತಾಯಿ ಪ್ರೇಮಾ ಕುಮಾರಿ, ಮರಣದಂಡನೆಯನ್ನು ಮನ್ನಾ ಮಾಡುವಂತೆ ದಣಿವರಿಯಿಲ್ಲದೆ ಪ್ರಚಾರ ಮಾಡುತ್ತಿದ್ದಾರೆ.

ಈ ವರ್ಷದ ಆರಂಭದಲ್ಲಿ, ಸಂತ್ರಸ್ತೆಯ ಕುಟುಂಬಕ್ಕೆ ಪರಿಹಾರ ಹಣ ಪಾವತಿಸಲು ಮಾತುಕತೆ ನಡೆಸಲು ಅವರು ಯೆಮನ್ ರಾಜಧಾನಿ ಸನಾಗೆ ಪ್ರೇಮ ಕುಮಾರಿ ಪ್ರಯಾಣ ಬೆಳೆಸಿದ್ದಾರೆ. ಯೆಮನ್ ಮೂಲದ ಎನ್ಆರ್ಐ ಸಾಮಾಜಿಕ ಕಾರ್ಯಕರ್ತರ ಗುಂಪಾದ ʼಸೇವ್ ನಿಮಿಷಾ ಪ್ರಿಯಾ ಇಂಟರ್ನ್ಯಾಶನಲ್ ಆಕ್ಷನ್ ಕೌನ್ಸಿಲ್ʼ ಅವರ ಪ್ರಯತ್ನಗಳನ್ನು ಬೆಂಬಲಿಸಿದೆ.

ಮಂಗಳವಾರ, ಯೆಮನ್ನಿಂದ ಮಲಯಾಳಂ ಟಿವಿಯೊಂದರಲ್ಲಿ ಕಾಣಿಸಿಕೊಂಡ ಪ್ರೇಮಾ ಕುಮಾರಿ ಅವರು ತುರ್ತು ಮಧ್ಯಸ್ಥಿಕೆಗಾಗಿ ಭಾವನಾತ್ಮಕ ಸಂದೇಶ ಹಂಚಿಕೊಂಡಿದ್ದಾರೆ.

“ಭಾರತ ಮತ್ತು ಕೇರಳ ಸರ್ಕಾರಗಳಿಗೆ ಮತ್ತು ನಿಮಿಷಾಳನ್ನು ಉಳಿಸಲು ರಚಿಸಲಾದ ಸಮಿತಿಯು ಇಲ್ಲಿಯವರೆಗೆ ಒದಗಿಸಿದ ಎಲ್ಲಾ ಬೆಂಬಲಕ್ಕಾಗಿ ನಾನು ತುಂಬಾ ಕೃತಜ್ಞನಾಗಿದ್ದೇನೆ. ಆದರೆ ಇದು ನನ್ನ ಅಂತಿಮ ಮನವಿ, ದಯವಿಟ್ಟು ಆಕೆಯ ಜೀವ ಉಳಿಸಲು ನಮಗೆ ಸಹಾಯ ಮಾಡಿ. ಸಮಯ ಮೀರಿದೆ” ಎಂದು ಕೈ ಜೋಡಿಸಿ ಕಣ್ಣೀರು ಸುರಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News