ಭಾರತ-ಚೀನಾ ಗಡಿ ವಿಚಾರದಲ್ಲಿ ಮೋದಿ, ಅಮಿತ್ ಶಾ ಸುಳ್ಳು ಹೇಳುತ್ತಿದ್ದಾರೆ: ಸುಬ್ರಮಣಿಯನ್ ಸ್ವಾಮಿ

Update: 2024-09-19 10:25 GMT

ಸುಬ್ರಮಣಿಯನ್ ಸ್ವಾಮಿ (Photo: PTI)

ಹೊಸದಿಲ್ಲಿ: ಬಿಜೆಪಿಯ ಹಿರಿಯ ನಾಯಕ ಸುಬ್ರಮಣಿಯನ್ ಸ್ವಾಮಿ ಮತ್ತೊಮ್ಮೆ ಪ್ರಧಾನಿ ನರೇಂದ್ರ ಮೋದಿ ಮತ್ತು ಅಮಿತ್ ಶಾ ವಿರುದ್ಧ ವಾಗ್ದಾಳಿ ನಡೆಸಿದ್ದು, ಭಾರತ-ಚೀನಾ ಗಡಿ ವಿಚಾರಕ್ಕೆ ಸಂಬಂಧಿಸಿ ಸುಳ್ಳು ಹೇಳುತ್ತಿರುವ ಮೋದಿ-ಶಾ ದೇಶದ್ರೋಹದ ಅಪರಾಧಕ್ಕೆ ಗುರಿಯಾಗುತ್ತಾರೆ ಎಂದು ಹೇಳಿದ್ದಾರೆ.

ಈ ಕುರಿತು ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಸುಬ್ರಮಣಿಯನ್ ಸ್ವಾಮಿ, 2020ರ ಎಪ್ರಿಲ್ ನಿಂದ ಚೀನಾ 4046 ಚದರ ಕಿಲೋಮೀಟರ್ ವಿವಾದಾಸ್ಪದ ಲಡಾಖ್ ಪ್ರದೇಶವನ್ನು ವಶಪಡಿಸಿಕೊಂಡಿದೆ. ಆದರೆ ಈ ಜೋಡಿಯು ಯಾರೂ ಬಂದಿಲ್ಲ ಎಂದು ಸುಳ್ಳನ್ನು ಹೇಳಿಕೊಂಡು ಬಂದಿದೆ. ಈ ಬಗ್ಗೆ ಸತ್ಯ ಹೊರಬಂದರೆ ದೇಶದ್ರೋಹದ ಅಪರಾಧಕ್ಕೆ ಗುರಿಯಾಗುವುದು ಮೋದಿ-ಅಮಿತ್ ಶಾಗೆ ತಿಳಿದಿರಲಿ ಎಂದು ಹೇಳಿದ್ದಾರೆ.

ಇದಕ್ಕೂ ಮೊದಲು ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದ ಸುಬ್ರಹ್ಮಣಿಯನ್ ಸ್ವಾಮಿ, ಚೀನಾದ ಪೀಪಲ್ಸ್ ಲಿಬರೇಶನ್ ಆರ್ಮಿ (ಪಿಎಲ್ಎ) ಅರುಣಾಚಲ ಪ್ರದೇಶದ ಭಾರತೀಯ ಭೂಪ್ರದೇಶದೊಳಗೆ ಕನಿಷ್ಠ 60 ಕಿಲೋಮೀಟರ್ ಪ್ರವೇಶಿಸಿದೆ ಎಂಬ ಸುದ್ದಿ ಲೇಖನವನ್ನು ಉಲ್ಲೇಖಿಸಿ ಚೀನಾದೊಂದಿಗಿನ ಭಾರತದ ಸಂಬಂಧವನ್ನು ಮುರಿಯಲು ಒತ್ತಾಯಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News