'ಪುಷ್ಪ 2' ಟ್ರೈಲರ್ ಬಿ ಬಿಡುಗಡೆ ಕಾರ್ಯಕ್ರಮದ ಪಾಸ್ ಪಡೆಯಲು ನೂಕು ನುಗ್ಗಲು ; ಕಾಲ್ತುಳಿತವಾಗುವ ಪರಿಸ್ಥಿತಿ ನಿರ್ಮಾಣ

Update: 2024-11-17 18:36 IST
Photo of Pushpa2

ಪುಷ್ಪ 2' ಚಿತ್ರದ ಟ್ರೈಲರ್| PC : X 

  • whatsapp icon

ಹೊಸದಿಲ್ಲಿ : 'ಪುಷ್ಪ 2' ಚಿತ್ರದ ಟ್ರೈಲರ್ ಬಿಡುಗಡೆ ಕಾರ್ಯಕ್ರಮದ ಪಾಸ್ ಪಡೆಯಲು ಅಭಿಮಾನಿಗಳು ಒಮ್ಮೆಲೇ ನುಗ್ಗಿದ್ದರಿಂದ ನೂಕು ನುಗ್ಗಲು ಉಂಟಾಗಿ ಕಾಲ್ತುಳಿತವಾಗುವ ಪರಿಸ್ಥಿತಿ ನಿರ್ಮಾಣವಾದ ಘಟನೆ ಬಿಹಾರದ ಪಾಟ್ನಾದಲ್ಲಿ ನಡೆದಿದೆ.

ಚಲನಚಿತ್ರ ಅಭಿಮಾನಿಗಳು ಕಾರ್ಯಕ್ರಮಕ್ಕೆಂದು ಪಾಸ್‌ಗಳನ್ನು ಪಡೆಯುವ ಸಂದರ್ಭ ನೂಕು ನುಗ್ಗಲಿನಿಂದ ಕಾಲ್ತುಳಿತದಂತಹ ಸನ್ನಿವೇಶವ ನಿರ್ಮಾಣವಾಗಿರುವ ದೃಶ್ಯ ಕ್ಯಾಮೆರಾ ಕಣ್ಣುಗಳಲ್ಲಿ ಸೆರೆಹಿಡಿಯಾಗಿದೆ.

ಈ ವರ್ಷದ ಬಹುನಿರೀಕ್ಷಿತ ಚಲನಚಿತ್ರಗಳಲ್ಲಿ ಒಂದಾಗಿರುವ 'ಪುಷ್ಪ 2' ಚಿತ್ರವು ಡಿಸೆಂಬರ್ 5 ರಂದು ಬೆಳ್ಳಿತೆರೆಗೆ ಬರಲಿದ್ದು, ಚಿತ್ರತಂಡ ರವಿವಾರ ಸಂಜೆ ಬಿಹಾರದ ಪಾಟ್ನಾದಲ್ಲಿರುವ ಗಾಂಧಿ ಮೈದಾನದಲ್ಲಿ ಚಿತ್ರದ ಟ್ರೈಲರ್ ಬಿಡುಗಡೆ ಕಾರ್ಯಕ್ರಮ ಆಯೋಜಿಸಿದೆ.

'ಪುಷ್ಪ 2' ಚಿತ್ರದಲ್ಲಿ ಅಲ್ಲು ಅರ್ಜುನ್, ಫಹದ್ ಫಾಸಿಲ್, ರಶ್ಮಿಕಾ ಮಂದಣ್ಣ, ಮತ್ತು ಶ್ರೀ ತೇಜ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

ಪುಷ್ಪಾ: ದಿ ರೈಸ್ 2021 ಬಾಕ್ಸ್ ಆಫೀಸ್‌ನಲ್ಲಿ ಭಾರಿ ಯಶಸ್ಸನ್ನು ಕಂಡಿತ್ತು. ಅಲ್ಲು ಅರ್ಜುನ್ ಈ ಚಿತ್ರದ ಅಭಿನಯಕ್ಕಾಗಿ 2021 ರ ರಾಷ್ಟೀಯ ಅತ್ಯುತ್ತಮ ನಟ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದರು.

'ಪುಷ್ಪಾ: ದಿ ರೈಸ್' ಮೊದಲ ಭಾಗವಾಗಿದ್ದು, ಆಕ್ಷನ್ ಥ್ರಿಲ್ಲರ್ ಕಥಾಹಂದರಗಳ ಚಿತ್ರವು ನಾಯಕ ನಟ ಪುಷ್ಪ ಮತ್ತು ಪೊಲೀಸ್ ಇನ್ಸ್‌ಪೆಕ್ಟರ್ ಭನ್ವರ್ ಸಿಂಗ್ ನಡುವಿನ ಘರ್ಷಣೆಯ ಸುತ್ತ ಸಾಗುತ್ತದೆ. 'ಪುಷ್ಪ 2: ದಿ ರೂಲ್' ಇದರ ಮುಂದುವರಿದ ಭಾಗವಾಗಿದ್ದು ಪ್ರೇಕ್ಷಕರಲ್ಲಿ ಕುತೂಹಲ ಕೆರಳಿಸಿದೆ.

'ಪುಷ್ಪಾ: ದಿ ರೈಸ್' ಭಾರತೀಯ ಅತ್ಯಂತ ದುಬಾರಿ ಚಲನಚಿತ್ರಗಳಲ್ಲಿ ಒಂದು. ಸುಮಾರು 250 ಕೋಟಿ ಬಜೆಟ್‌ನಲ್ಲಿ ತಯಾರಾದ 'ಪುಷ್ಪ: ದಿ ರೈಸ್' ಬಾಕ್ಸ್ ಆಫೀಸ್‌ನಲ್ಲಿ 350 ಕೋಟಿಗೂ ಹೆಚ್ಚು ಹಣ ಗಳಿಸಿದೆ. ಎರಡೂ ಭಾಗಗಳನ್ನು ಸುಕುಮಾರ್ ನಿರ್ದೇಶಿಸಿದ್ದು, ದೇವಿ ಶ್ರೀ ಪ್ರಸಾದ್ ಅವರ ಸಂಗೀತ ಮತ್ತು ಮಿರೋಸ್ಲಾವ್ ಕುಬಾ ಬ್ರೋಜೆಕ್ ಅವರ ಛಾಯಾಗ್ರಹಣದೊಂದಿಗೆ ಪುಷ್ಪ 2, ಇಲ್ಲಿಯವರೆಗಿನ ಭಾರತೀಯ ಅತ್ಯಂತ ದುಬಾರಿ ಚಲನಚಿತ್ರಗಳಲ್ಲಿ ಒಂದಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News