ಪಹಲ್ಗಾಮ್ ಕಾರ್ಯಾಚರಣೆಗಳ ಕುರಿತು ಪ್ರಧಾನಿಗೆ ರಾಜನಾಥ ಸಿಂಗ್ ಮಾಹಿತಿ

Update: 2025-04-28 21:44 IST
ಪಹಲ್ಗಾಮ್ ಕಾರ್ಯಾಚರಣೆಗಳ ಕುರಿತು ಪ್ರಧಾನಿಗೆ ರಾಜನಾಥ ಸಿಂಗ್ ಮಾಹಿತಿ

 ಪ್ರಧಾನಿ ನರೇಂದ್ರ ಮೋದಿ , ರಾಜನಾಥ ಸಿಂಗ್ | PTI 

  • whatsapp icon

ಹೊಸದಿಲ್ಲಿ: ರಕ್ಷಣಾ ಸಚಿವ ರಾಜನಾಥ ಸಿಂಗ್ ಅವರು ಸೋಮವಾರ ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿಯಾಗಿ ಎ.22ರ ಪಹಲ್ಗಾಮ್ ಭಯೋತ್ಪಾದಕ ದಾಳಿಯ ಬಳಿಕ ಜಮ್ಮುಕಾಶ್ಮೀರದಲ್ಲಿ ನಡೆಯುತ್ತಿರುವ ಕಾರ್ಯಾಚರಣೆಗಳು ಮತ್ತು ಭದ್ರತಾ ವ್ಯವಸ್ಥೆಗಳ ಕುರಿತು ವಿವರಗಳನ್ನು ನೀಡಿದರು. ದಾಳಿಯಲ್ಲಿ 26 ಜನರು ಕೊಲ್ಲಲ್ಪಟ್ಟಿದ್ದರು.

ಜಮ್ಮುಕಾಶ್ಮೀರದಾದ್ಯಂತ ಭದ್ರತಾ ಪಡೆಗಳು ಭಯೋತ್ಪಾದಕರು ಮತ್ತು ಅವರ ಸಹಚರರ ಮನೆಗಳ ಮೇಲೆ ದಾಳಿಗಳನ್ನು ನಡೆಸುತ್ತಿದ್ದು,ಈ ಸರಣಿ ತೀವ್ರ ಕಾರ್ಯಾಚರಣೆಗಳ ನಡುವೆ ಮುಚ್ಚಿದ ಬಾಗಿಲುಗಳ ಹಿಂದೆ ಸುಮಾರು 40 ನಿಮಿಷಗಳ ಕಾಲ ಉಭಯ ನಾಯಕರು ಚರ್ಚಿಸಿದರು.

ಪ್ರಧಾನಿ ಭೇಟಿಗೆ ಮುನ್ನ ಸಿಂಗ್ ಸೌತ್ ಬ್ಲಾಕ್ಗೆ ಭೇಟಿ ನೀಡಿ ಕಾಶ್ಮೀರದಲ್ಲಿಯ,ವಿಶೇಷವಾಗಿ ಪಹಲ್ಗಾಮ್ನಲ್ಲಿಯ ಸ್ಥಿತಿಯ ಬಗ್ಗೆ ಸೇನಾ ಮುಖ್ಯಸ್ಥರಿಂದ ವಿವರವಾದ ಮಾಹಿತಿಗಳನ್ನು ಪಡೆದುಕೊಂಡಿದ್ದರು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News