5 ಕೋಟಿ ರೂ. ನೀಡುವಂತೆ ಸಲ್ಮಾನ್ ಖಾನ್‌ಗೆ ಬೇಡಿಕೆ ಇರಿಸಿದ ಮೊಬೈಲ್ ಸಂಖ್ಯೆಯಿಂದ ಕ್ಷಮಾಪಣೆ ಸಂದೇಶ

Update: 2024-10-22 15:43 GMT

ನಟ ಸಲ್ಮಾನ್ ಖಾನ್ | PC : PTI

ಮುಂಬೈ : ಬಾಲಿವುಡ್ ನಟ ಸಲ್ಮಾನ್ ಖಾನ್ ಅವರಿಂದ 5 ಕೋಟಿ ರೂ. ಬೇಡಿಕೆ ಇರಿಸಿ ಈ ಹಿಂದೆ ಬೆದರಿಕೆ ಸಂದೇಶ ಕಳುಹಿಸಿದ ಮೊಬೈಲ್ ಫೋನ್ ನಂಬರ್‌ನಿಂದ ಮುಂಬೈ ಸಂಚಾರ ಪೊಲೀಸರು ಕ್ಷಮೆ ಯಾಚನೆ ಸಂದೇಶ ಸ್ವೀಕರಿಸಿದ್ದಾರೆ.

ಸಂಚಾರ ಪೊಲೀಸ್‌ನ ವ್ಯಾಟ್ಸ್ ಆ್ಯಪ್ ಸಹಾಯವಾಣಿ ಸೋಮವಾರ ಈ ಕ್ಷಮೆ ಯಾಚನೆ ಸಂದೇಶವನ್ನು ಸ್ವೀಕರಿಸಿದೆ ಎಂದು ಅಧಿಕಾರಿಗಳು ಮಂಗಳವಾರ ತಿಳಿಸಿದ್ದಾರೆ.

ತನಿಖೆಯ ಸಂದರ್ಭ ಈ ಕ್ಷಮೆ ಯಾಚನೆ ಸಂದೇಶವನ್ನು ಬೆದರಿಕೆ ಒಡ್ಡಿ ಸಂದೇಶ ಕಳುಹಿಸಲು ಬಳಸಿದ ಮೊಬೈಲ್ ಸಂಖ್ಯೆಯಿಂದಲೇ ರವಾನಿಸಿರುವುದು ದೃಡಪಟ್ಟಿದೆ ಎಂದು ಅವರು ತಿಳಿಸಿದ್ದಾರೆ.

ನಗರ ಸಂಚಾರ ನಿಯಂತ್ರಣ ಕೊಠಡಿ ತನ್ನ ವ್ಯಾಟ್ಸ್ ಆ್ಯಪ್ ಸಹಾಯವಾಣಿಯ ಮೂಲಕ ಗುರುವಾರ ಸಲ್ಮಾನ್ ಖಾನ್ ಅವರಿಂದ 5 ಕೋಟಿ ರೂ. ಬೇಡಿಕೆ ಒಡ್ಡಿ ಬೆದರಿಕೆ ಸಂದೇಶ ಸ್ವೀಕರಿಸಿತ್ತು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News