ಜನರ ಗಮನ ಬೇರೆಡೆ ತಿರುಗಿಸಲು ಬಿಜೆಪಿಯಿಂದ ಸನಾತನ ಧರ್ಮ ವಿವಾದ: ಸಿಎಂ ಸ್ಟಾಲಿನ್

Update: 2023-09-13 17:01 GMT

ಎಂ.ಕೆ. ಸ್ಟಾಲಿನ್ | Photo; PTI 

ಚೆನ್ನೈ: ಕೇಂದ್ರ ಸರಕಾರದ ವಿಫಲತೆ ಹಾಗೂ ಭ್ರಷ್ಟಾಚಾರದಿಂದ ಜನರ ಗಮನವನ್ನು ಬೇರೆಡೆಗೆ ತಿರುಗಿಸಲು ಬಿಜೆಪಿ ಸನಾತನ ಧರ್ಮದ ವಿವಾದವನ್ನು ಕೆದಕುತ್ತಿದೆ ಎಂದು ತಮಿಳುನಾಡು ಮುಖ್ಯಮಂತ್ರಿ ಹಾಗೂ ಡಿಎಂಕೆ ಅಧ್ಯಕ್ಷ ಎಂ.ಕೆ. ಸ್ಟಾಲಿನ್ ಬುಧವಾರ ಹೇಳಿದ್ದಾರೆ.

ದ್ರಾವಿಡರ್ ಕಳಗಂ ಅಧ್ಯಕ್ಷ ಕೆ. ವೀರಮಣಿ ಅವರು ನೀಡಿದ ಹೇಳಿಕೆಯನ್ನು ಬೆಂಬಲಿಸಿದ ಸ್ಟಾಲಿನ್, ‘‘ವೀರಮಣಿ ಅವರು ಸರಿಯಾದ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಡಿಎಂಕೆ ಕಾರ್ಯಕರ್ತರು ಹಾಗೂ ಮೈತ್ರಿ ಪಕ್ಷದ ನಾಯಕರು ಇದನ್ನು ಅನುಸರಿಸಬೇಕು’’ ಎಂದರು.

ರಾಜಕೀಯ ವಿವಾದಕ್ಕೆ ಕಾರಣವಾಗಿರುವ ಸನಾತನ ಧರ್ಮದ ಹೇಳಿಕೆ ಕುರಿತಂತೆ ಪುತ್ರ ಹಾಗೂ ಸಂಸದ ಉದಯನಿಧಿ ಸ್ಟಾಲಿನ್ ಅವರ ವಿರುದ್ಧ ಮುಂಬೈಯಲ್ಲಿ ಎಫ್ಐಆರ್ ದಾಖಲಾದ ಒಂದು ದಿನದ ಬಳಿಕ ಎಂ.ಕೆ. ಸ್ಟಾಲಿನ್ ಈ ಹೇಳಿಕೆ ನೀಡಿದ್ದಾರೆ.

ಸನಾತನ ಧರ್ಮದ ವಿವಾದದ ಕುರಿತಂತೆ ಸೂಕ್ತ ಪ್ರತಿಕ್ರಿಯೆ ನೀಡುವಂತೆ ಪ್ರಧಾನಿ ನರೇಂದ್ರ ಮೋದಿ ಅವರು ತನ್ನ ಸಂಪುಟ ಸಹೋದ್ಯೋಗಿಗಳಿಗೆ ಸೂಚಿಸಿದ್ದಾರೆ. ಅದರಂತೆ ಕೇಂದ್ರ ಸಚಿವರು ಈ ವಿಷಯದ ಕುರಿತು ಪ್ರತಿದಿನ ಮಾತನಾಡುತ್ತಿದ್ದಾರೆ ಹಾಗೂ ಚರ್ಚೆ ನಡೆಸುತ್ತಿದ್ದಾರೆ. ಆದರೆ, ನಾವು ನಮ್ಮ ಗಮನವನ್ನು ಬೇರೆಡೆ ತಿರುಗಿಸಬಾರದು.

ಅವರು ನಮ್ಮ ಗಮನವನ್ನು ಬೇರೆಡೆಗೆ ತಿರುಗಿಸುವ ತಂತ್ರಕ್ಕೆ ದಾರಿ ಮಾಡಿಕೊಡಬಾರದು ಎಂದು ಸ್ಟಾಲಿನ್ ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News