ಲೋಕಸಭೆ ಚುನಾವಣೆಯಲ್ಲಿನ ಸುಳ್ಳು ನಿರೂಪಣೆಗಳನ್ನು ಬಯಲು ಮಾಡಿದ ಆರೆಸ್ಸೆಸ್ ಅನ್ನು ಶರದ್ ಪವಾರ್ ಪ್ರಶಂಸಿಸಿದ್ದಾರೆ: ಫಡ್ನವಿಸ್

Update: 2025-01-11 16:41 GMT

ನಾಗಪುರ: 2024ರ ಲೋಕಸಭಾ ಚುನಾವಣೆಯಲ್ಲಿ ವಿರೋಧ ಪಕ್ಷಗಳು ಮಾಡಿದ್ದ ಸುಳ್ಳು ಪ್ರಚಾರವನ್ನು ಆರೆಸ್ಸೆಸ್ ಮೆಟ್ಟಿ ನಿಂತ ನಂತರ, ಎನ್ಸಿಪಿ (ಎಸ್ಪಿ) ವರಿಷ್ಠ ಶರದ್ ಪವಾರ್, ಆರೆಸ್ಸೆಸ್ ಅನ್ನು ಪ್ರಶಂಸಿಸಿದ್ದಾರೆ ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಹೇಳಿದ್ದಾರೆ.

ಸಂವಿಧಾನವನ್ನು ಬದಲಿಸಲು ಹಾಗೂ ಮೀಸಲಾತಿಯನ್ನು ಕೊನೆಗೊಳಿಸಲು ಬಿಜೆಪಿ 400 ಸ್ಥಾನಗಳನ್ನು ಬಯಸುತ್ತಿದೆ ಎಂದು ವಿರೋಧ ಪಕ್ಷಗಳು ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಬಲವಾಗಿ ಆರೋಪಿಸಿದ್ದವು. ನಂತರ, ಈ ಪ್ರಚಾರದಿಂದ ತನಗೆ ಹಿನ್ನಡೆಯಾಯಿತು ಎಂದು ಸ್ವತಃ ಬಿಜೆಪಿಯೇ ಒಪ್ಪಿಕೊಂಡಿತ್ತು.

ಇತ್ತೀಚೆಗೆ ಶರದ್ ಪವಾರ್ ಆರೆಸ್ಸೆಸ್ ಅನ್ನು ಪ್ರಶಂಸಿಸಿದ ನಂತರ, 2024ರ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ವಿರೋಧ ಪಕ್ಷಗಳ ಮೈತ್ರಿಕೂಟವಾದ ಎಂವಿಎ ಸುಳ್ಳು ನಿರೂಪಣೆಗಳನ್ನು ಹರಡುವಲ್ಲಿ ಯಶಸ್ವಿಯಾಗಿತ್ತು ಎಂದು ದೇವೇಂದ್ರ ಫಡ್ನವಿಸ್ ಆರೋಪಿಸಿದ್ದಾರೆ.

“ವಿಧಾನಸಭಾ ಚುನಾವಣೆಗಳು ಸಮೀಪಿಸುವಾಗ, ಆರೆಸ್ಸೆಸ್ ನಿಂದ ಪ್ರೇರಣೆ ಪಡೆದು ವಿವಿಧ ಕ್ಷೇತ್ರಗಳಲ್ಲಿ ದುಡಿಯುತ್ತಿರುವ ವ್ಯಕ್ತಿಗಳು ಸುಳ್ಳು ನಿರೂಪಣೆಯ ಬಲೂನ್ ಅನ್ನು ಒಡೆದು ಹಾಕುವಲ್ಲಿ ತಮ್ಮ ತಮ್ಮ ಪಾತ್ರಗಳನ್ನು ನಿರ್ವಹಿಸಿದರು. ಶರದ್ ಪವಾರ್ ಸಾಹೇಬರು ತುಂಬಾ ಬುದ್ಧಿವಂತರು. ಅವರು ಈ ಆಯಾಮವನ್ನು ಖಂಡಿತ ಅಧ್ಯಯನ ಮಾಡಿರುತ್ತಾರೆ. ಆರೆಸ್ಸೆಸ್ ನಿಯಮಿತ ರಾಜಕೀಯ ಶಕ್ತಿಯಲ್ಲದಿದ್ದರೂ, ರಾಷ್ಟ್ರೀಯತೆಯ ಶಕ್ತಿ ಎಂಬುದು ಅವರಿಗೆ ಮನವರಿಕೆಯಾಗಿದೆ. ಯಾವುದೇ ಸ್ಪರ್ಧೆಯಲ್ಲಿ ಇತರರನ್ನು ಪ್ರಶಂಸಿಸುವುದು ಉತ್ತಮ” ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ.

ಇದೇ ಕಾರಣಕ್ಕೆ ಪವಾರ್ ಅವರು ಆರೆಸ್ಸೆಸ್ ಅನ್ನು ಪ್ರಶಂಸಿಸಿರಬಹುದು ಎಂದೂ ಅವರು ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News