ಟೆಲಿಕಾಂ ಕಂಪೆನಿಗಳಿಗೆ TRAI ಚಾಟಿಯೇಟು | ಶೀಘ್ರದಲ್ಲೇ ಕೇವಲ ಕರೆ, SMS ರೀಚಾರ್ಜ್ ವೋಚರ್ ಮಾತ್ರ ಖರೀದಿಸಬಹುದು!

Update: 2024-12-27 19:36 IST
CALL

ಸಾಂದರ್ಭಿಕ ಚಿತ್ರ | PC : freepik.com

  • whatsapp icon

ಹೊಸದಿಲ್ಲಿ : ಭಾರತದ ಟೆಲಿಕಾಂ ನಿಯಂತ್ರಕ TRAI, ಇಂಟರ್ನೆಟ್ ಡೇಟಾವನ್ನು ಖರೀದಿಸಲು ಯಾವುದೇ ಒತ್ತಾಯವಿಲ್ಲದೆ ಕರೆಗಳು ಮತ್ತು SMS ಗಾಗಿ ಪ್ರತ್ಯೇಕವಾಗಿ ರೀಚಾರ್ಜ್ ಯೋಜನೆಗಳನ್ನು ನೀಡಲು ಮೊಬೈಲ್ ಸೇವಾ ಕಂಪೆನಿಗಳಿಗೆ ಕಡ್ಡಾಯಗೊಳಿಸುವ ನಿಯಮಗಳಿಗೆ ತಿದ್ದುಪಡಿ ಮಾಡಿದೆ.

TRAI ಇತ್ತೀಚೆಗೆ ಘೋಷಿಸಿರುವ ನೂತನ ನಿಯಮದಂತೆ, ಮೊಬೈಲ್ ಡೇಟಾವನ್ನು ಬಳಸದ ಗ್ರಾಹಕರಿಗೆ ಸೂಕ್ತವಾದ ಪರ್ಯಾಯ ಆಯ್ಕೆಗಳನ್ನು ಒದಗಿಸಲಿದೆ. ಅಲ್ಲದೇ ವಿಶೇಷ ರೀಚಾರ್ಜ್ ಕೂಪನ್‌ಗಳ ಮಾನ್ಯತೆಯನ್ನು ಪ್ರಸ್ತುತ 90 ದಿನಗಳಿಂದ ಗರಿಷ್ಠ 365 ದಿನಗಳವರೆಗೆ ವಿಸ್ತರಿಸಲಿದೆ.

ಈ ಬದಲಾವಣೆಯಿಂದ ಭಾರತದ ಜನಸಂಖ್ಯೆಯ ಬಹುಪಾಲು ಜನರಿಗೆ, ವಿಶೇಷವಾಗಿ ಸುಮಾರು 15 ಕೋಟಿ 2G ಬಳಕೆದಾರರು, ಡ್ಯುಯಲ್-ಸಿಮ್ ಬಳಕೆದಾರರು, ಹಿರಿಯ ನಾಗರಿಕರು ಮತ್ತು ಗ್ರಾಮೀಣ ನಿವಾಸಿಗಳಿಗೆ ಸಹಕಾರಿಯಾಗಲಿದೆ ಎಂದು ನಿರೀಕ್ಷಿಸಲಾಗಿದೆ. ಈ ಕ್ರಮವು ಗ್ರಾಹಕರು ಅವರು ಬಳಸದ ಡೇಟಾಗೆ ಹೆಚ್ಚುವರಿ ಖರ್ಚು ಮಾಡುವ ಬದಲು ಅವರಿಗೆ ಅಗತ್ಯವಿರುವ ಸೇವೆಗಳಿಗೆ ಮಾತ್ರ ಪಾವತಿಸಲು ಅನುಮತಿಸಲಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News