ಸುನೀತಾ ವಿಲಿಯಮ್ಸ್ ಭೂಮಿಗೆ ವಾಪಾಸ್ಸಾಗುತ್ತಿದ್ದಂತೆ ಗುಜರಾತ್‌ನ ಜುಲಾಸನ್ ಗ್ರಾಮದಲ್ಲಿ ಸಂಭ್ರಮಾಚರಣೆ

Update: 2025-03-19 12:19 IST
ಸುನೀತಾ ವಿಲಿಯಮ್ಸ್ ಭೂಮಿಗೆ ವಾಪಾಸ್ಸಾಗುತ್ತಿದ್ದಂತೆ ಗುಜರಾತ್‌ನ ಜುಲಾಸನ್ ಗ್ರಾಮದಲ್ಲಿ ಸಂಭ್ರಮಾಚರಣೆ

Photo credit: PTI

  • whatsapp icon

ಗಾಂಧಿನಗರ: ನಾಸಾದ ಗಗನಯಾತ್ರಿ ಸುನೀತಾ ವಿಲಿಯಮ್ಸ್ ಸುರಕ್ಷಿತವಾಗಿ ಭೂಮಿಗೆ ವಾಪಾಸ್ಸಾಗುತ್ತಿದ್ದಂತೆ ಗುಜರಾತ್‌ನ ಮೆಹ್ಸಾನಾ ಜಿಲ್ಲೆಯ ಜುಲಾಸನ್ ಗ್ರಾಮದಲ್ಲಿ ಜನರು ಸಂಭ್ರಮಾಚರಣೆ ನಡೆಸಿದರು.

ಸುನೀತಾ ವಿಲಿಯಮ್ಸ್ ಅವರ ಪೂರ್ವಜರು ಗುಜರಾತ್‌ನ ಮೆಹ್ಸಾನಾ ಜಿಲ್ಲೆಯವರಾಗಿದ್ದಾರೆ. ಜುಲಾಸನ್ ಗ್ರಾಮದ ದೇವಸ್ಥಾನದಲ್ಲಿ ದೂರದರ್ಶನದ ಪರದೆಯಲ್ಲಿ ನೇರಪ್ರಸಾರವನ್ನು ವೀಕ್ಷಿಸಲು ಹಳ್ಳಿಯ ಜನರು ಜಮಾಯಿಸಿದರು. ನಾಸಾ ಗಗನ ಯಾತ್ರಿಗಳನ್ನು ಕರೆದೊಯ್ದ ಸ್ಪೇಸ್ಎಕ್ಸ್ ಕ್ಯಾಪ್ಸುಲ್ ಫ್ಲಾರಿಡಾದ ಕಡಲ ತೀರಕ್ಕೆ ಬಂದಿಳಿಯುತ್ತಿದ್ದಂತೆ ಸಂಭ್ರಮಾಚರಣೆ ನಡೆಸಿದರು.

ಸುನೀತಾ ವಿಲಿಯಮ್ಸ್ ಬಂದಿಳಿದ ತಕ್ಷಣ ಜುಲಾಸನ್ ಗ್ರಾಮದ ನಿವಾಸಿಗಳು ಪಟಾಕಿ ಸಿಡಿಸಿ, ನೃತ್ಯ ಮಾಡಿ, ʼಹರ ಹರ ಮಹಾದೇವ’ ಎಂದು ಘೋಷಣೆ ಕೂಗಿ ಸಂಭ್ರಮಾಚರಣೆ ನಡೆಸಿದರು. ಇದಕ್ಕೂ ಮೊದಲು ಸುನೀತಾ ವಿಲಿಯಮ್ಸ್ ಸುರಕ್ಷಿತವಾಗಿ ವಾಪಾಸ್ಸು ಬರುವಂತೆ ದೇವಸ್ಥಾನದಲ್ಲಿ ಪ್ರಾರ್ಥನೆಯನ್ನು ನಡೆಸಿದ್ದರು.

ಸುನಿತಾ ಅವರ ತಂದೆ ದೀಪಕ್ ಪಾಂಡ್ಯ 1957ರಲ್ಲಿ ಜುಲಾಸನ್‌ನಿಂದ ಅಮೆರಿಕಕ್ಕೆ ವಲಸೆ ಹೋಗಿದ್ದರು ಎಂದು ಹೇಳಲಾಗಿದೆ. ಈ ಕುರಿತು ಸುನಿತಾ ಅವರ ಸಹೋದರಸಂಬಂಧಿ ನವೀನ್ ಪಾಂಡ್ಯ ಮಾತನಾಡಿ, ಗ್ರಾಮಸ್ಥರು ಸುನಿತಾ ಕ್ಷೇಮಕ್ಕಾಗಿ ‘ಅಖಂಡ ಜ್ಯೋತಿ’ಯನ್ನು ಬೆಳಗಿದರು. ಊರಲ್ಲಿ ಹೋಳಿ ಮತ್ತು ದೀಪಾವಳಿಯ ಸಂಭ್ರಮ ಮನೆಮಾಡಿದೆ. ಸುನಿತಾ ಅವರನ್ನು ಗ್ರಾಮಕ್ಕೆ ಆಹ್ವಾನಿಸಲು ಕಾಯುತ್ತಿದ್ದೇವೆ ಎಂದು ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News