ವಿಹಿಂಪ ಸಭೆಯಲ್ಲಿ ಭಾಗವಹಿಸಿದ ಕರ್ನಾಟಕದಲ್ಲಿ ಹಿಜಾಬ್ ನಿಷೇಧ ಎತ್ತಿ ಹಿಡಿದಿದ್ದ ಸುಪ್ರೀಂ ಮಾಜಿ ನ್ಯಾಯಾಧೀಶ!

Update: 2024-09-12 15:23 GMT

PC : X \ @arjunrammeghwal

ಹೊಸದಿಲ್ಲಿ : ಹಿಜಾಬ್ ನಿಷೇಧ ಪ್ರಕರಣದಲ್ಲಿ ಕರ್ನಾಟಕ ಉಚ್ಚ ನ್ಯಾಯಾಲಯದ ತೀರ್ಪನ್ನು ಎತ್ತಿ ಹಿಡಿದಿದ್ದ ಸರ್ವೋಚ್ಚ ನ್ಯಾಯಾಲಯದ ಮಾಜಿ ನ್ಯಾಯಾಧೀಶ ನ್ಯಾ.ಹೇಮಂತ ಗುಪ್ತಾ ಅವರು ವಿಹಿಂಪ ಕಾನೂನು ಕೋಶವು ರವಿವಾರ ಇಲ್ಲಿ ಆಯೋಜಿಸಿದ್ದ ನ್ಯಾಯಾಧೀಶರ ಸಭೆಗೆ ಹಾಜರಾಗಿದ್ದರು.

‘ಓರ್ವ ಭಾರತೀಯ ಪ್ರಜೆಯಾಗಿ ನಾನು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದೆ. ನಿವೃತ್ತಿಯ ಬಳಿಕ ಇಂತಹ ಕಾರ್ಯಕ್ರಮಗಳಿಗೆ ಹಾಜರಾಗುವ ನ್ಯಾಯಾಧೀಶರಿಗೆ ಸಂಬಂಧಿಸಿದಂತೆ ಇತರರ ಬಗ್ಗೆ ನಾನು ಪ್ರತಿಕ್ರಿಯಿಸಲು ಸಾಧ್ಯವಿಲ್ಲ. ಆದರೆ ದೇಶದ ಯಾವುದೇ ಇತರ ನಾಗರಿಕರಂತೆ ವಿವಿಧ ವೇದಿಕೆಗಳೊಂದಿಗೆ ಗುರುತಿಸಿಕೊಳ್ಳಲು ಹಾಗೂ ಪ್ರಚಲಿತ ಸಮಸ್ಯೆಗಳು ಮತ್ತು ವಿಷಯಗಳ ಬಗ್ಗೆ ಚರ್ಚಿಸಲು ನನಗೆ ಸ್ವಾತಂತ್ರ್ಯವಿದೆ ’ ಎಂದು ಗುಪ್ತಾರನ್ನು ಉಲ್ಲೇಖಿಸಿ ಸುದ್ದಿ ಜಾಲತಾಣವು ವರದಿ ಮಾಡಿದೆ.

ಸಭೆಯಲ್ಲಿನ ಚರ್ಚೆಗಳು ವಾರಣಾಸಿ ಮತ್ತು ಮಥುರಾ ದೇವಸ್ಥಾನಗಳ ಸ್ಥಿತಿಗತಿ,ವಕ್ಫ್(ತಿದ್ದುಪಡಿ) ಮಸೂದೆ ಮತ್ತು ಧಾರ್ಮಿಕ ಮತಾಂತರಗಳ ಕುರಿತು ಕಳವಳಗಳು ಸೇರಿದಂತೆ ಹಿಂದುತ್ವ ಗುಂಪುಗಳು ಎತ್ತಿರುವ ವಿಷಯಗಳನ್ನು ಕೇಂದ್ರೀಕರಿಸಿದ್ದವು ಎಂದು ವರದಿಗಳನ್ನು ಉಲ್ಲೇಖಿಸಿ ಅದು ಹೇಳಿದೆ. 

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News