ಚುನಾವಣಾ ಪೂರ್ವ ಉಚಿತ ಭರವಸೆ ನಿಷೇಧಕ್ಕೆ ಕೋರಿ ಪಿಐಎಲ್| ಕೇಂದ್ರ, ಚುನಾವಣಾ ಆಯೋಗದಿಂದ ಪ್ರತಿಕ್ರಿಯೆ ಕೋರಿದ ಸುಪ್ರೀಂ ಕೋರ್ಟ್
Update: 2024-10-15 07:06 GMT
ಹೊಸದಿಲ್ಲಿ: ರಾಜಕೀಯ ಪಕ್ಷಗಳು ಚುನಾವಣಾ ಪೂರ್ವದಲ್ಲಿ ನೀಡುತ್ತಿರುವ ಉಚಿತ ಭರವಸೆಗಳನ್ನು ಲಂಚವೆಂದು ಪರಿಗಣಿಸುವಂತೆ ಕೋರಿ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಕೇಂದ್ರ ಮತ್ತು ಚುನಾವಣಾ ಆಯೋಗಕ್ಕೆ ಮಂಗಳವಾರ ನೋಟಿಸ್ ಜಾರಿ ಮಾಡಿದೆ.
ಚುನಾವಣಾ ಪೂರ್ವದಲ್ಲಿ ಪಕ್ಷಗಳು ಇಂತಹ ಭರವಸೆಯನ್ನು ನೀಡುವುದನ್ನು ನಿಷೇಧಿಸಲು ಚುನಾವಣಾ ಆಯೋಗ ತಕ್ಷಣವೇ ಕ್ರಮ ಕೈಗೊಳ್ಳಬೇಕೆಂದು ಪಿಐಎಲ್ ನಲ್ಲಿ ಒತ್ತಾಯಿಸಲಾಗಿದೆ.