ಸುಶಾಂತ್ ಸಿನ್ಹಾರ ವೀಡಿಯೊದ ಥಂಬ್‌ನೇಲ್‌ನಲ್ಲಿ ಐಪಿಎಸ್ ಅಧಿಕಾರಿಯನ್ನು ಉಗ್ರ ಘಾಝಿ ಬಾಬಾ ಎಂದು ತಪ್ಪಾಗಿ ಚಿತ್ರಣ!

Update: 2025-04-28 18:11 IST
ಸುಶಾಂತ್ ಸಿನ್ಹಾರ ವೀಡಿಯೊದ ಥಂಬ್‌ನೇಲ್‌ನಲ್ಲಿ ಐಪಿಎಸ್ ಅಧಿಕಾರಿಯನ್ನು ಉಗ್ರ ಘಾಝಿ ಬಾಬಾ ಎಂದು ತಪ್ಪಾಗಿ ಚಿತ್ರಣ!

Photo:X/@zoo_bear

  • whatsapp icon

ಹೊಸದಿಲ್ಲಿ: ಮಾಜಿ ಗಡಿ ಭದ್ರತಾ ಪಡೆ (ಬಿಎಸ್‌ಎಫ್) ಅಧಿಕಾರಿ ಎನ್.ಎನ್. ದುಬೆ ಅವರೊಂದಿಗಿನ ಪತ್ರಕರ್ತ ಸುಶಾಂತ್ ಸಿನ್ಹಾ ಅವರ ಸಂದರ್ಶನದ ಯೂಟ್ಯೂಬ್ ವೀಡಿಯೊದ ಥಂಬ್‌ನೇಲ್‌ನಲ್ಲಿ ಐಪಿಎಸ್ ಅಧಿಕಾರಿಯನ್ನು ಭಯೋತ್ಪಾದಕ ಘಾಝಿ ಬಾಬಾ ಎಂದು ತಪ್ಪಾಗಿ ಚಿತ್ರಿಸಿರುವ ಘಟನೆ ನಡೆದಿದೆ.

ತಪ್ಪು ಚಿತ್ರಣವು ವೈರಲ್ ಆಗುತ್ತಿದ್ದಂತೆ ಯುಟ್ಯೂಬ್ ವಿಡಿಯೋ ವನ್ನು ಅಳಿಸಿ ಹಾಕಿಲಾಗಿದೆ.

ಎನ್.ಎನ್. ದುಬೆ ಅವರೊಂದಿಗಿನ ಸಂದರ್ಶನದಲ್ಲಿ ಜೈಶ್-ಎ-ಮೊಹಮ್ಮದ್ ಮತ್ತು ಹರ್ಕತ್-ಉಲ್-ಅನ್ಸಾರ್‌ಗೆ ಸಂಬಂಧಿಸಿದ ಕಪ್ಪುಪಟ್ಟಿಗೆ ಸೇರಿಸಲಾದ ಭಯೋತ್ಪಾದಕ ಘಾಝಿ ಬಾಬಾ ಬಗ್ಗೆ ಇಬ್ಬರೂ ಚರ್ಚಿಸಿದ್ದಾರೆ. 2001 ರ ಭಾರತೀಯ ಸಂಸತ್ತಿನ ದಾಳಿ ಸೇರಿದಂತೆ ಹಲವಾರು ಭಯೋತ್ಪಾದಕ ದಾಳಿಗಳಲ್ಲಿ ಭಾಗಿಯಾಗಿದ್ದ ಬಾಬಾ, ಆಗಸ್ಟ್ 2003 ರಲ್ಲಿ ಶ್ರೀನಗರದಲ್ಲಿ ನಡೆದ ಬಿಎಸ್‌ಎಫ್ ಕಾರ್ಯಾಚರಣೆಯ ಸಮಯದಲ್ಲಿ ಕೊಲ್ಲಲ್ಪಟ್ಟಿದ್ದನು.

ಈ ಸಂದರ್ಶನದ ವಿಡಿಯೋ ವನ್ನು ಯೂಟ್ಯೂಬ್ ಗೆ ಅಪ್ ಲೋಡ್ ಮಾಡುವಾಗ ಮಾಡಿದ ಥಂಬ್‌ನೇಲ್‌ ಈಗ ಪ್ರಮಾದಕ್ಕೆ ಕಾರಣವಾಗಿದೆ. ಭಯೋತ್ಪಾದಕರಾದ ಮಸೂದ್ ಅಝರ್ ಮತ್ತು ಒಸಾಮಾ ಬಿನ್ ಲಾಡೆನ್ ನಡುವೆ ಇರುವ ವೀಡಿಯೊದ ಥಂಬ್‌ನೇಲ್‌ನಲ್ಲಿ ಯಾರೂ ಗುರುತಿಸದ ವ್ಯಕ್ತಿಯೊಬ್ಬರ ಚಿತ್ರವನ್ನು ಹಾಕಲಾಗಿತ್ತು. ಆ ವ್ಯಕ್ತಿ ಪಂಜಾಬ್‌ನ ಎಡಿಜಿಪಿ ಐಪಿಎಸ್ ಅಧಿಕಾರಿ ಫಯಾಝ್ ಫಾರೂಕಿ!

ಥಂಬ್‌ನೇಲ್‌ನಲ್ಲಿ ಐಪಿಎಸ್ ಫಾರೂಕಿ ಅವರನ್ನು ಘಾಝಿ ಬಾಬಾ ಎಂದು ತಪ್ಪಾಗಿ ಚಿತ್ರಿಸಲಾಗಿದೆ. ಅಲ್ಲದೇ ಚಿತ್ರದಲ್ಲಿ ಅವರ ಹಣೆಯ ಮೇಲೆ ಗುಂಡು ಹಾರಿಸಲಾಗಿದೆ. ಇದು ಘಾಝಿ ಬಾಬಾನನ್ನು ಗುಂಡು ಹಾರಿಸಿ ಕೊಲ್ಲಲಾಯಿತು ಎಂದು ಸೂಚ್ಯವಾಗಿದೆ.

ಈ ಕುರಿತು ವರದಿ ಪ್ರಕಟವಾಗಿದ್ದರೂ, ವಿಡಿಯೋವನ್ನು ತೆಗೆದು ಹಾಕಲಾಗಿದ್ದು ಬಿಟ್ಟರೆ ಸಿನ್ಹಾ ಅಥವಾ ಅವರ ತಂಡವು ಇನ್ನೂ ಅಧಿಕೃತವಾಗಿ ತಪ್ಪನ್ನು ಒಪ್ಪಿಕೊಳ್ಳಲಿಲ್ಲ. ಈ ಕುರಿತು ಕ್ಷಮೆಯಾಚಿಸಿಲ್ಲ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News