ಪ್ರಸ್ತಾವಿತ ʼಒಂದು ದೇಶ ಒಂದು ಚುನಾವಣೆ ನೀತಿʼ ವಿರೋದಿಸಿ ನಿರ್ಣಯ ಮಂಡಿಸಿದ ತಮಿಳುನಾಡು ಸಿಎಂ ಸ್ಟಾಲಿನ್‌

Update: 2024-02-14 08:17 GMT

Photo credit: ANI

ಚೆನ್ನೈ: ಕೇಂದ್ರದ ʼಒಂದು ದೇಶ ಒಂದು ಚುನಾವಣೆʼ ನೀತಿಯನ್ನು ವಿರೋಧಿಸಿ ಇಂದು ತಮಿಳುನಾಡು ವಿಧಾನಸಭೆಯಲ್ಲಿ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್‌ ನಿರ್ಣಯ ಮಂಡಿಸಿದ್ದಾರೆ. 2026ರಲ್ಲಿ ನಡೆಯಲಿರುವ ಕ್ಷೇತ್ರಗಳ ಮರುವಿಂಗಡಣೆ ಪ್ರಕ್ರಿಯೆಯನ್ನೂ ವಿರೋಧಿಸಿ ನಿರ್ಣಯ ಕೈಗೊಳ್ಳಲಾಗಿದೆ.

“ಒಂದು ದೇಶ ಒಂದು ಚುನಾವಣೆ ನೀತಿಯನ್ನು ಜಾರಿಗೊಳಿಸದಂತೆ ಈ ಸದನವು ಕೇಂದ್ರ ಸರ್ಕಾರವನ್ನು ಆಗ್ರಹಿಸುತ್ತದೆ ಈ ನೀತಿಯು ಪ್ರಜಾಪ್ರಭುತ್ವದ ವಿರುದ್ಧವಾಗಿದೆ, ಜಾರಿಗೊಳಿಸುವುದು ಸಾಧ್ಯವಾಗುವುದಿಲ್ಲ ಹಾಗೂ ಸಂವಿಧಾನದಲ್ಲಿಯೂ ಅಡಕವಾಗಿಲ್ಲ”‌, ಎಂದು ಸದನದಲ್ಲಿ ಮಾತನಾಡುತ್ತಾ ಸ್ಟಾಲಿನ್‌ ಹೇಳಿದರು.

ಕ್ಷೇತ್ರಗಳ ಮರುವಿಂಗಡಣೆಯನ್ನೂ ವಿರೋಧಿಸಿರುವ ತಮಿಳುನಾಡು ಸರ್ಕಾರ ಇದರಿಂದ ತಮಿಳುನಾಡಿನಿಂದ ಸಂಸದರ ಸಂಖ್ಯೆ ಕಡಿಮೆಯಾಗುತ್ತದೆ ಎಂದು ಹೇಳಿದೆ.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News