ಬಿಜೆಪಿ ಸರಕಾರದಡಿ ರೈಲು ಅಪಘಾತ ಸಾಮಾನ್ಯವಾಗಿದೆ: ಟಿಎಂಸಿ ಟೀಕೆ

Update: 2024-07-30 07:20 GMT

Photo: PTI

ಕೋಲ್ಕತ್ತಾ: ದೇಶಾದ್ಯಂತ ನಡೆಯುತ್ತಿರುವ ಸರಣಿ ರೈಲು ಅಪಘಾತಗಳ ಕುರಿತು ಮಂಗಳವಾರ ಕೇಂದ್ರ ಸರಕಾರವನ್ನು ಟೀಕಿಸಿರುವ ತೃಣಮೂಲ ಕಾಂಗ್ರೆಸ್ ಪಕ್ಷವು, ಬಿಜೆಪಿ ಸರಕಾರದ ಅಡಿ ಇದು ಸಾಮಾನ್ಯವಾಗಿದೆ ಎಂದು ಕೇಂದ್ರ ಸರಕಾರದ ವಿರುದ್ಧ ವಾಗ್ದಾಳಿ ನಡೆಸಿದೆ. ರೈಲು ಅಪಘಾತಗಳಿಗೆ ರೈಲ್ವೆ ಸಚಿವಾಲಯ ಶೂನ್ಯ ಹೊಣೆಗಾರಿಕೆ ಪ್ರದರ್ಶಿಸುತ್ತಿದೆ ಎಂದೂ ಆರೋಪಿಸಿದೆ.

ಮಂಗಳವಾರ ಮುಂಜಾನೆ ಜಾರ್ಖಂಡ್ ನ ಸೆರೈಕೆಲಾ-ಖರ್ಸವಾನ್ ಜಿಲ್ಲೆಯಲ್ಲಿ ಹೌರಾ-ಮುಂಬೈ ಮೇಲ್ ರೈಲಿನ ಕನಿಷ್ಠ 18 ಬೋಗಿಗಳು ಹಳಿ ತಪ್ಪಿದ್ದರಿಂದ ಇಬ್ಬರು ಮೃತಪಟ್ಟು, 20 ಮಂದಿ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಅಪಘಾತವು ವಾಯುವ್ಯ ರೈಲ್ವೆಯ ಚಕ್ರಧರ್ ಪುರ್ ವಿಭಾಗದಡಿಯ ಜಮ್ಷೆಡ್ ಪುರ್ ನಿಂದ ಸುಮಾರು 80 ಕಿಮೀ ದೂರವಿರುವ ಬಾರಾಬಂಬೂ ಬಳಿ ಮುಂಜಾನೆ 3.45ರ ವೇಳೆಗೆ ಸಂಭವಿಸಿದೆ ಎಂದು ಅವರು ಹೇಳಿದ್ದಾರೆ.

ಈ ಕುರಿತು ಎಕ್ಸ್ ಸಾಮಾಜಿಕ ಮಾಧ್ಯುಮದಲ್ಲಿ ಪೋಸ್ಟ್ ಮಾಡಿರುವ ಹಿರಿಯ ಟಿಎಂಸಿ ನಾಯಕಿ ಹಾಗೂ ಸಂಸದೆ ಸುಶ್ಮಿತಾ ದೇವ್, “ಇದು ಈಗ ಸಾಮಾನ್ಯವಾಗಿದೆ. ಅಶ್ವಿನಿ ವೈಷ್ಣವ್ ಅವರ ಹೊಣೆಗಾರಿಕೆ ಶೂನ್ಯವಾಗಿದೆ. ಭಾರತ ಸರಕಾರದ ಬಳಿ ಈ ಕುರಿತು ಯಾವುದೇ ಉತ್ತರವಿಲ್ಲ” ಎಂದು ವಾಗ್ದಾಳಿ ನಡೆಸಿದ್ದಾರೆ.

ಸುಶ್ಮಿತಾ ದೇವ್ ಅವರ ಆತಂಕವನ್ನು ಪ್ರತಿಧ್ವನಿಸಿರುವ ಅವರ ಸಹೋದ್ಯೋಗಿ ಹಾಗೂ ಸಂಸದೆ ಸಾಗರಿಕಾ ಘೋಷ್, “ಕೇಂದ್ರ ಸರಕಾರವು ತನ್ನ ನಿದ್ರೆಯ ಮಂಪರಿನಿಂದ ಎಚ್ಚೆತ್ತುಕೊಳ್ಳಲು ಮತ್ತೆಷ್ಟು ಅಪಘಾತಗಳು ಸಂಭವಿಸಬೇಕು?” ಎಂದು ಪ್ರಶ್ನಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ashfaq

contributor

Byline - ವಾರ್ತಾಭಾರತಿ

contributor

Similar News