ಧರಣಿ ಕುಳಿತಿದ್ದ ಟಿಎಂಸಿ ನಾಯಕಿ ಮಹುವಾ ಮೊಯಿತ್ರಾರನ್ನು ಕೃಷಿಭವನದಿಂದ ಹೊರಹಾಕಿದ ಮಹಿಳಾ ಪೊಲೀಸರು

Update: 2023-10-04 05:01 GMT

Photo: //twitter.com/MahuaMoitra

ಹೊಸದಿಲ್ಲಿ: ಕೃಷಿ ಭವನದಲ್ಲಿ ಧರಣಿ ಕುಳಿತಿದ್ದ ಟಿಎಂಸಿ ಹಿರಿಯ ನಾಯಕಿ ಮಹುವಾ ಮೊಯಿತ್ರಾ ಸೇರಿದಂತೆ ಹಲವು ಮಂದಿ ನಾಯಕರನ್ನು ಪೊಲೀಸರು ಬಂಧಿಸಿದ ಘಟನೆಯ ವಿಡಿಯೊ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಗ್ರಾಮೀಣಾಭಿವೃದ್ಧಿ ಖಾತೆ ರಾಜ್ಯ ಸಚಿವೆ ಸಾಧ್ವಿ ನಿರಂಜನ್ ಜ್ಯೋತಿಯವರನ್ನು ಭೇಟಿ ಮಾಡಲು ಟಿಎಂಸಿ ಮುಖಂಡರ ನಿಯೋಗ ಬಯಸಿತ್ತು. ಆದರೆ ಸಚಿವರು ಪ್ರತಿಭಟನಾಕಾರರನ್ನು ಭೇಟಿ ಮಾಡಲಿಲ್ಲ. ಸುಮಾರು ಮೂರು ಗಂಟೆ ಕಾಲ ಕಾಯಿಸಿದ ಬಳಿಕ ಸಚಿವರು ಭೇಟಿ ಮಾಡಲು ಬಯಸುವುದಿಲ್ಲ ಎಂದು ಮಾಹಿತಿ ನೀಡಲಾಯಿತು ಎನ್ನುವುದು ಟಿಎಂಸಿ ಮುಖಂಡರ ಆರೋಪ.

ಈ ಹಂತದಲ್ಲಿ ಟಿಎಂಸಿ ಮುಖಂಡರು ಧರಣಿ ಆರಂಭಿಸಿದರು. ಸಚಿವರನ್ನು ಭೇಟಿ ಮಾಡದೇ ತಾವು ಇಲ್ಲಿಂದ ತೆರಳುವುದಿಲ್ಲ ಎಂದು ಮುಖಂಡರು ಪಟ್ಟು ಹಿಡಿದರು. ಇದಾದ ಕೆಲ ಸಮಯದ ಬಳಿಕ ಇಡೀ ನಿಯೋಗವನ್ನು ಬಲವಂತವಾಗಿ ಅಲ್ಲಿಂದ ತೆರವುಗೊಳಿಸಿದ ಪೊಲೀಸರು, ಎಲ್ಲ ಮುಖಂಡರನ್ನು ವಶಕ್ಕೆ ಪಡೆದರು.


Tags:    

Writer - ವಾರ್ತಾಭಾರತಿ

contributor

Editor - Naufal

contributor

Byline - ವಾರ್ತಾಭಾರತಿ

contributor

Similar News