ಜಾರ್ಖಂಡ್‌ ನಲ್ಲಿ ಸೋಮವಾರ ವಿಶ್ವಾಸ ಮತ ಯಾಚನೆ; ಗರಿಗೆದರಿದ ರೆಸಾರ್ಟ್ ರಾಜಕಾರಣ

Update: 2024-02-03 06:45 GMT

Photo: NDTV 

ರಾಂಚಿ: ನೂತನ ಮುಖ್ಯಮಂತ್ರಿಯಾಗಿ ನೇಮಕಗೊಂಡಿರುವ ಚಂಪೈ ಸೊರೇನ್ ಅವರು ಸೋಮವಾರ ರಾಜ್ಯ ವಿಧಾನಸಭೆಯಲ್ಲಿ ತಮ್ಮ ಸರ್ಕಾರದ ವಿಶ್ವಾಸ ಮತವನ್ನು ಸಾಬೀತು ಪಡಿಸಲಿದ್ದಾರೆ ಎಂದು ndtv.com ವರದಿ ಮಾಡಿದೆ.

ವಿಶ್ವಾಸ ಮತ ಯಾಚನೆಗೂ ಮುನ್ನ, ಶಾಸಕರ ಪಕ್ಷಾಂತರವನ್ನು ತಡೆಯಲು ಜೆಎಂಎಂ ನೇತೃತ್ವದ ಮೈತ್ರಿ ಸರ್ಕಾರದ ಸುಮಾರು 40 ಶಾಸಕರನ್ನು ತೆಲಂಗಾಣದ ರಾಜಧಾನಿ ಹೈದರಾಬಾದ್ ಬಳಿ ಇರುವ ರೆಸಾರ್ಟ್ ಒಂದಕ್ಕೆ ಸ್ಥಳಾಂತರಿಸಲಾಗಿದೆ.

ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯದಿಂದ ಬಂಧನಕ್ಕೊಳಗಾಗಿರುವ ಮಾಜಿ ಮುಖ್ಯಮಂತ್ರಿ ಹೇಮಂತ್ ಸೊರೇನ್, ಮುಂದಿನ ತಿಂಗಳಲ್ಲಿ ನಡೆಯಲಿರುವ ಲೋಕಸಭಾ ಚುನಾವಣೆಗೂ ಮುನ್ನ ನಮ್ಮ ಪಕ್ಷವನ್ನು ದುರ್ಬಲಗೊಳಿಸಲು ಬಿಜೆಪಿ ಮತ್ತು ಕೇಂದ್ರ ಸರ್ಕಾರವು ಉದ್ದೇಶಪೂರ್ವಕವಾಗಿ ಪ್ರಯತ್ನಿಸುತ್ತಿವೆ ಎಂದು ಆರೋಪಿಸಿದ್ದಾರೆ.

ಜಾರ್ಖಂಡ್‌ ವಿಧಾನಸಭೆಯ ಒಟ್ಟು ಬಲ 81 ಸ್ಥಾನಗಳಾಗಿದ್ದು, ಈ ಪೈಕಿ ವಿಶ್ವಾಸ ಮತದಲ್ಲಿ ಗೆಲುವು ಸಾಧಿಸಲು 41 ಮತಗಳನ್ನು ಪಡೆಯಬೇಕಿದೆ.

ವಿಶ್ವಾಸ ಮತ ಯಾಚನೆ ಪ್ರಕ್ರಿಯೆ ಮುಗಿಯುವವೆರಗೂ ಶಾಸಕರನ್ನು ಸುರಕ್ಷಿತ ತಾಣದಲ್ಲಿ ಇರಿಸಲಾಗಿದೆ ಎಂದು ಜಾರ್ಖಂಡ್‌ ರಾಜ್ಯದ ಕಾಂಗ್ರೆಸ್ ಉಸ್ತುವಾರಿ ಗುಲಾಮ್ ಅಹ್ಮದ್ ಮೀರ್ ತಿಳಿಸಿದ್ದಾರೆ.

ಜೆಎಂಎಂ-ಕಾಂಗ್ರೆಸ್-ಆರ್ಜೆಡಿ ಮೈತ್ರಿಕೂಟದ ಒಟ್ಟು ಸದಸ್ಯ ಬಲ 46 ಇದ್ದು, ಈ ಪೈಕಿ ಜೆಎಂಎಂ-28, ಕಾಂಗ್ರೆಸ್-16, ಆರ್ಜೆಡಿ-1 ಹಾಗೂ ಸಿಪಿಐ(ಎಂಎಲ್)-1 ಶಾಸಕರನ್ನು ಹೊಂದಿವೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News