ಉತ್ತರ ಪ್ರದೇಶದಲ್ಲಿ ಎರಡು ಗೂಡ್ಸ್ ರೈಲುಗಳು ಮುಖಾಮುಖಿ ಢಿಕ್ಕಿ; ರೈಲ್ವೆ ಅಧಿಕಾರಿಗಳಿಗೆ ಗಾಯ

Update: 2025-02-04 13:27 IST
ಉತ್ತರ ಪ್ರದೇಶದಲ್ಲಿ ಎರಡು ಗೂಡ್ಸ್ ರೈಲುಗಳು ಮುಖಾಮುಖಿ ಢಿಕ್ಕಿ; ರೈಲ್ವೆ ಅಧಿಕಾರಿಗಳಿಗೆ ಗಾಯ

Screengrab:X/ANI

  • whatsapp icon

ಫತೇಪುರ್ (ಉತ್ತರ ಪ್ರದೇಶ): ಮಂಗಳವಾರ ಬೆಳಗ್ಗೆ ಎರಡು ಗೂಡ್ಸ್ ರೈಲುಗಳನ್ನು ನಡುವೆ ಸಂಭವಿಸಿದ ಢಿಕ್ಕಿಯಲ್ಲಿ ಇಬ್ಬರು ರೈಲ್ವೆ ಅಧಿಕಾರಿಗಳು ಗಾಯಗೊಂಡಿರುವ ಘಟನೆ ಉತ್ತರ ಪ್ರದೇಶದ ಫತೇಪುರ್ ನಲ್ಲಿ ನಡೆದಿದೆ.

ಗಾಯಾಳುಗಳನ್ನು ಅನುಜ್ ರಾಜ್ (28) ಹಾಗೂ ಶಿವ ಶಂಕರ್ ಯಾದವ್ (35) ಎಂದು ಗುರುತಿಸಲಾಗಿದೆ.

ವಿವರಗಳ ಪ್ರಕಾರ, ಫತೇಪುರ್ ಜಿಲ್ಲೆಯ ಪಂಭಿಪುರ್ ಬಳಿ ಒಂದು ರೈಲು ಮತ್ತೊಂದು ರೈಲಿಗೆ ಢಿಕ್ಕಿ ಹೊಡೆದಿದ್ದರಿಂದ ಈ ಅಪಘಾತ ಸಂಭವಿಸಿದೆ.

ಈ ಢಿಕ್ಕಿಯ ತೀವ್ರತೆಗೆ ಭದ್ರತಾ ಸಿಬ್ಬಂದಿಗಳ ಬೋಗಿ ಹಾಗೂ ಎಂಜಿನ್ ಹಳಿ ತಪ್ಪಿದೆ. ಅಲ್ಲದೆ, ಈ ಅಪಘಾತದಿಂದ ಈ ಮಾರ್ಗದಲ್ಲಿ ಸಂಚರಿಸಬೇಕಿದ್ದ ಇತರ ರೈಲುಗಳಿಗೂ ಅಡಚಣೆಯುಂಟಾಯಿತು.

ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿರುವ ವಿಡಿಯೊ ಒಂದರಲ್ಲಿ ರೈಲೊಂದು ಹಳಿ ತಪ್ಪಿರುವುದನ್ನು ಕಾಣಬಹುದಾಗಿದೆ. ಮತ್ತೊಂದು ವಿಡಿಯೊದಲ್ಲಿ ಅಪಘಾತ ಸ್ಥಳದಲ್ಲಿ ರೈಲ್ವೆ ಅಧಿಕಾರಿಗಳಿರುವುದನ್ನು ನೋಡಬಹುದಾಗಿದೆ.


Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News