ಹಾಥ್ರಸ್ ಕಾಲ್ತುಳಿತ ಪ್ರಕರಣ: ಆದಿತ್ಯನಾಥ್ ಸರಕಾರ ಸಂತ್ರಸ್ತರಿಗೆ ಮುಕ್ತ ಮನಸ್ಸಿನಿಂದ ಪರಿಹಾರ ನೀಡಬೇಕು ಎಂದ ರಾಹುಲ್ ಗಾಂಧಿ

Update: 2024-07-05 12:57 IST
ಹಾಥ್ರಸ್ ಕಾಲ್ತುಳಿತ ಪ್ರಕರಣ: ಆದಿತ್ಯನಾಥ್ ಸರಕಾರ ಸಂತ್ರಸ್ತರಿಗೆ ಮುಕ್ತ ಮನಸ್ಸಿನಿಂದ ಪರಿಹಾರ ನೀಡಬೇಕು ಎಂದ ರಾಹುಲ್ ಗಾಂಧಿ

Photo:X/@INCIndia

  • whatsapp icon

ಹಾತ್ರಸ್: "ಹಲವಾರು ಮಂದಿ ಕಾಲ್ತುಳಿತ ಘಟನೆಯಲ್ಲಿ ಮೃತಪಟ್ಟಿದ್ದು, ಇದನ್ನು ರಾಜಕೀಕರಣಗೊಳಿಸುವುದು ನನಗೆ ಬೇಕಿಲ್ಲ.‌ ಆದರೆ, ಅಲ್ಲಿ ಕೊಂಚ ಲೋಪವಾಗಿದೆ. ಈ ಕುರಿತು ತನಿಖೆ ನಡೆಸಬೇಕು. ಇದಕ್ಕಿಂತ ಮುಖ್ಯವಾದ ಸಂಗತಿಯೆಂದರೆ ಕಾಲ್ತುಳಿತ ಘಟನೆಯ ಸಂತ್ರಸ್ತರ ಕುಟುಂಬಗಳಿಗೆ ಪರಿಹಾರ ನೀಡಬೇಕು" ಎಂದು ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ ಆಗ್ರಹಿಸಿದ್ದಾರೆ.

ಇಂದು ಹಾಥ್ರಸ್ ತಲುಪಿದ ರಾಹುಲ್ ಗಾಂಧಿ, ಕಾಲ್ತುಳಿತ ಘಟನೆಯ ಸಂತ್ರಸ್ತರ ಕುಟುಂಬಗಳ ಸದಸ್ಯರನ್ನು ಭೇಟಿ ಮಾಡಿ, ಅವರಿಗೆ ಸಾಂತ್ವನ ಹೇಳಿದರು. 

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News