ಮಧ್ಯ ಪ್ರದೇಶ | ಸರಕಾರಿ ಜಾಗದಲ್ಲಿ ದಲಿತ ವ್ಯಕ್ತಿಯ ಅಂತ್ಯಕ್ರಿಯೆ ನೆರವೇರಿಸಲು ಮೇಲ್ಜಾತಿಯವರಿಂದ ಅಡ್ಡಿ: ಎರಡೂ ಗುಂಪುಗಳ ನಡುವೆ ಮಾರಾಮಾರಿ

Update: 2025-04-28 20:23 IST
ಮಧ್ಯ ಪ್ರದೇಶ | ಸರಕಾರಿ ಜಾಗದಲ್ಲಿ ದಲಿತ ವ್ಯಕ್ತಿಯ ಅಂತ್ಯಕ್ರಿಯೆ ನೆರವೇರಿಸಲು ಮೇಲ್ಜಾತಿಯವರಿಂದ ಅಡ್ಡಿ: ಎರಡೂ ಗುಂಪುಗಳ ನಡುವೆ ಮಾರಾಮಾರಿ

ಸಾಂದರ್ಭಿಕ ಚಿತ್ರ

 

  • whatsapp icon

ಶಿಯೋಪುರ್: ಸರಕಾರಿ ಜಾಗದಲ್ಲಿ ದಲಿತ ವ್ಯಕ್ತಿಯೊಬ್ಬರ ಅಂತ್ಯಕ್ರಿಯೆ ನೆರವೇರಿಸಲು ಮೇಲ್ಜಾತಿ ಅತಿಕ್ರಮಣಕಾರು ಅಡ್ಡಿ ಪಡಿಸಿದ ಪರಿಣಾಮ, ಉಭಯ ಗುಂಪುಗಳ ನಡುವೆ ಕಲ್ಲು ತೂರಾಟ ನಡೆದು, ರಸ್ತೆ ತಡೆಗೆ ಕಾರಣವಾದ ಘಟನೆ ಸೋಮವಾರ ಮಧ್ಯಪ್ರದೇಶದ ಶಿಯೋಪುರ್ ನ ಲೀಲ್ಡಾ ಗ್ರಾಮದಲ್ಲಿ ನಡೆದಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

“ಕೆಲ ದಿನಗಳ ಹಿಂದೆ ಬೆಂಗಳೂರಿನಲ್ಲಿ ಸಂಭವಿಸಿದ್ದ ರಸ್ತೆ ಅಪಘಾತದಲ್ಲಿ ದಲಿತ ವ್ಯಕ್ತಿಯೊಬ್ಬರು ಮೃತಪಟ್ಟಿದ್ದರು. ಕೆಲ ಮೇಲ್ಜಾತಿ ವ್ಯಕ್ತಿಗಳು ಅತಿಕ್ರಮಣ ಮಾಡಿದ್ದ ಸರಕಾರಿ ಜಾಗದಲ್ಲಿ ಅವರ ಅಂತ್ಯಕ್ರಿಯೆ ನೆರವೇರಿಸಲು ಅವರ ಮೃತದೇಹವನ್ನು ಅವರ ಪುತ್ರ ಹಾಗೂ ಅವರ ಸಮುದಾಯದ ಜನರು ತೆಗೆದುಕೊಂಡು ಹೋಗುವಾಗ, ಮೇಲ್ಜಾತಿಯ ಅತಿಕ್ರಮಣಕಾರರು ತಡೆದಿದ್ದಾರೆ” ಎಂದು ಅವರು ಹೇಳಿದ್ದಾರೆ.

“ಈ ಸಂಬಂಧ ನಡೆದ ವಾಗ್ದಾದದಿಂದಾಗಿ ಎರಡೂ ಕಡೆಯವರು ಪರಸ್ಪರರ ಮೇಲೆ ಕಲ್ಲು ತೂರಾಟ ನಡೆಸಿದ್ದು, ನಂತರ, ಜಾಟವ್ ಸಮುದಾಯಕ್ಕೆ ಸೇರಿದ ಮೃತ ವ್ಯಕ್ತಿಯ ಸಂಬಂಧಿಕರು ರಸ್ತೆಗೆ ಅಡ್ಡಲಾಗಿ ಅವರ ಮೃತದೇಹವನ್ನಿಟ್ಟು, ರಸ್ತೆ ತಡೆ ನಡೆಸಿದ್ದಾರೆ” ಎಂದೂ ಅವರು ತಿಳಿಸಿದ್ದಾರೆ.

ಸುದ್ದಿ ತಿಳಿದು ಸ್ಥಳಕ್ಕೆ ಧಾವಿಸಿದ ಪೊಲೀಸ್ ಮತ್ತು ಜಿಲ್ಲಾಡಳಿತದ ಅಧಿಕಾರಿಗಳು ಎರಡೂ ಕಡೆಯವರನ್ನು ಸಮಾಧಾನಗೊಳಿಸಿದರು ಎಂದು ಶಿಯೋಪುರ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿರೇಂದ್ರ ಜೈನ್ ಹೇಳಿದ್ದಾರೆ.

“ಜಾಟವ್ ಸಮುದಾಯಕ್ಕೆ ಸೇರಿದ ಸ್ಮಶಾನವು ರೈಲ್ವೆಯಿಂದ ಸ್ವಾಧೀನಕ್ಕೊಳಗಾಗಿದ್ದರಿಂದ, ಅವರು ಮತ್ತೊಂದು ಸಮುದಾಯದ ಜನರ ವಶದಲ್ಲಿರುವ ಜಾಗದಲ್ಲಿ ಅಂತ್ಯಕ್ರಿಯೆ ನೆರವೇರಿಸುತ್ತಾ ಬರುತ್ತಿದ್ದಾರೆ. ಹೀಗಾಗಿ, ಬಿಕ್ಕಟ್ಟು ಉಲ್ಬಣಿಸಿದೆ” ಎಂದು ಅವರು ತಿಳಿಸಿದ್ದಾರೆ.

“ಸುದ್ದಿ ತಿಳಿದು ಸ್ಥಳಕ್ಕೆ ಧಾವಿಸಿದ ಉಪ ವಿಭಾಗಾಧಿಕಾರಿ ಹಾಗೂ ಪೊಲೀಸ್ ಅಧಿಕಾರಿಯು ಪರಿಸ್ಥಿತಿಯನ್ನು ತಿಳಿಗೊಳಿಸಿದರು. ನಂತರ, ಎರಡೂ ಗುಂಪಿನೊಂದಿಗೆ ಸಮಾಲೋಚನೆ ನಡೆಸಲಾಯಿತು” ಎಂದು ಅವರು ಹೇಳಿದ್ದಾರೆ.

“ಈ ಜಾಗ ಸರಕಾರಕ್ಕೆ ಸೇರಿದ್ದು, ನಮ್ಮ ಸ್ಮಶಾನವನ್ನು ಸ್ವಾಧೀನ ಪಡಿಸಿಕೊಂಡ ನಂತರ, ನಮಗೆ ಈ ಜಾಗದಲ್ಲಿ ಅಂತ್ಯಕ್ರಿಯೆ ನೆರವೇರಿಸಲು ಸರಕಾರ ಹಾಗೂ ಪ್ರಾಧಿಕಾರಗಳು ಅನುಮತಿ ನೀಡಿದ್ದವು. ಆದರೆ, ಮೇಲ್ಜಾತಿಯ ಜನರು ಈ ಜಾಗವನ್ನು ಅಕ್ರಮವಾಗಿ ವಶಪಡಿಸಿಕೊಂಡಿದ್ದಾರೆ” ಎಂದು ಓರ್ವ ಪ್ರತಿಭಟನಾಕಾರ ಆರೋಪಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News