ಯುಪಿಎಸ್ಸಿ ಫಲಿತಾಂಶ ಪ್ರಕಟ: ಶಕ್ತಿ ದುಬೆ ದೇಶಕ್ಕೆ ಮೊದಲ ರ‍್ಯಾಂಕ್
Update: 2025-04-22 15:38 IST

ಶಕ್ತಿ ದುಬೆ (Photo credit: indiatoday.in)
ಹೊಸದಿಲ್ಲಿ : 2025ರ ಕೇಂದ್ರ ಲೋಕ ಸೇವಾ ಆಯೋಗದ(ಯುಪಿಎಸ್ಸಿ) ಪರೀಕ್ಷೆಯ ಅಂತಿಮ ಫಲಿತಾಂಶ ಪ್ರಕಟಗೊಂಡಿದೆ.
ಶಕ್ತಿ ದುಬೆ 2025ರ ಸಾಲಿನ ಯುಪಿಎಸ್ಸಿ ಪರೀಕ್ಷೆಯಲ್ಲಿ ದೇಶಕ್ಕೆ ಮೊದಲ ರ‍್ಯಾಂಕ್ ಪಡೆದಿದ್ದಾರೆ. ಹರ್ಷಿತಾ ಗೋಯಲ್ 2 ನೇ ರ‍್ಯಾಂಕ್ ಮತ್ತು ಡೋಂಗ್ರೆ ಅರ್ಚಿತ್ ಪರಾಗ್ ಅವರು ಮೂರನೇ ರ‍್ಯಾಂಕ್ ಪಡೆದುಕೊಂಡಿದ್ದಾರೆ.
ಆಯ್ಕೆಯಾದ 1009 ಅಭ್ಯರ್ಥಿಗಳಲ್ಲಿ 335 ಸಾಮಾನ್ಯ ವರ್ಗದ ಅಭ್ಯರ್ಥಿಗಳು, 109 ಆರ್ಥಿಕವಾಗಿ ದುರ್ಬಲ ವರ್ಗಕ್ಕೆ ಸೇರಿದವರು, 318 ಇತರ ಹಿಂದುಳಿದ ವರ್ಗಗಳಿಗೆ ಸೇರಿದವರು, 160 ಪರಿಶಿಷ್ಟ ಜಾತಿಗೆ (ಎಸ್ಸಿ) ಮತ್ತು 87 ಪರಿಶಿಷ್ಟ ಪಂಗಡಕ್ಕೆ (ಎಸ್ಟಿ) ಸೇರಿದ ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆ.
ಕೇಂದ್ರ ಲೋಕ ಸೇವಾ ಆಯೋಗ ಸೆಪ್ಟೆಂಬರ್ 2024ರಲ್ಲಿ ಲಿಖಿತ ಪರೀಕ್ಷೆ ನಡೆಸಿತ್ತು. ಜನವರಿ ಮತ್ತು ಎಪ್ರಿಲ್ 2025ರ ನಡುವೆ ಸಂದರ್ಶನ ನಡೆದಿತ್ತು.